Select Your Language

Notifications

webdunia
webdunia
webdunia
webdunia

ಮೈಸೂರು ದಸರಾ ಉತ್ಸವದಲ್ಲಿ ಅಪ್ಪು

ಮೈಸೂರು ದಸರಾ ಉತ್ಸವದಲ್ಲಿ ಅಪ್ಪು
ಬೆಂಗಳೂರು , ಮಂಗಳವಾರ, 4 ಅಕ್ಟೋಬರ್ 2022 (15:14 IST)
ನೂರಾರು ಕಲಾವಿದರು ಸ್ತಬ್ದಚಿತ್ರ ನಿರ್ಮಾಣದ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಶೇಕಡಾ 80 ರಷ್ಟು ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸ್ತಬ್ದಚಿತ್ರಗಳ ಮೂಲಕ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿವೆ. ಪ್ರತೀ ಜಿಲ್ಲೆಗಳ ಪ್ರತಿ ಜಿಲ್ಲೆಗಳ ಐತಿಹಾಸಿಕ , ಪ್ರಾಕೃತಿಕ, ಭೌಗೋಳಿಕ ಮತ್ತು ಪಾರಂಪರಿಕಗಳನ್ನು ಒಳಗೊಂಡಿರುವ ಸ್ತಬ್ದಚಿತ್ರಗಳಿಗೆ ಆದ್ಯತೆ ನೀಡಲಾಗುತ್ತಿದೆ.
 
ಪ್ರತಿ ಜಿಲ್ಲೆಯ ಸ್ತಬ್ದಚಿತ್ರದ ಜೊತೆಗೆ ಇದರ ಉಪಸಮಿತಿಯಿಂದ, ಮೈಸೂರು ವಿಶ್ವ ವಿದ್ಯಾನಿಲಯ, ಚೆಸ್ಕಾಂ, ಸಮಾಜ ಕಲ್ಯಾಣ ಇಲಾಖೆ, ಪ್ರವಾಸೋದ್ಯಮ ಇಲಾಖೆ,ಕೌಶಲ್ಯ ಕರ್ನಾಟಕ, ಕೆಎಂಎಫ್‌, ಕಾವೇರಿ ನಿರಾವರಿ ನಿಗಮ,ಆಜಾದಿ ಕಾ ಅಮೃತ ಮಹೋತ್ಸವ ಸಾರುವ ಸ್ತಬ್ದಚಿತ್ರದ ಮೂಲಕ ಕ್ಷೇತ್ರದ ಸಾಧನೆಗಳನ್ನು ಅಕ್ಟೋಬರ್‌ 5 ರಂದು ಜನರ ಮುಂದೆ ಪ್ರದರ್ಶಿಸಲಾಗುತ್ತದೆ.
ಚಾಮರಾಜನಗರದಿಂದ ಅಪ್ಪು ಮುಖದ ಸ್ತಬ್ದಚಿತ್ರ ಪ್ರಮುಖ ಆಕರ್ಷಣೆಯಾಗಿರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಂಬೂ ಸವಾರಿ ಸಕಲ ಸಿದ್ಧತೆ