ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಾಳುಗಳನ್ನ ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ.೯ ಜನ ಬಿಬಿಎಂಪಿ ಸಿಬ್ಬಂಧಿಗಳು ಸ್ಟೇಬಲ್ ಆಗಿದ್ದಾರೆ.೨೪-೪೮ ಘಂಟೆಗಳ ಕಾಲ ಅಬ್ಸವರ್ ವೇಷನ್ ನಲ್ಲಿರುತ್ತಾರೆ.ಸಂಪೂರ್ಣವಾಗಿ ಜೀವಕ್ಕೆ ಅಪಾಯ ಇಲ್ಲ ಎಂಬುದು ೨೪-೪೮ ಘಂಟೆಯಲ್ಲಿ ಗೊತ್ತಾಗುತ್ತೆ.ವೈದ್ಯರು ಉತ್ತಮ ಆರೋಗ್ಯ ಸೇವೆ ನೀಡ್ತಿದ್ದಾರೆ.ಈ ಘಟನೆ ಬಿಬಿಎಂಪಿ ಯಿಂದ ಆಗಬಾರದಿತ್ತು.ಸುರಕ್ಷತಾ ಕಟ್ಟಡ ಇರಬೇಕೆಂದು ಹೇಳುವ ಪಾಲಿಕೆಯಲ್ಲಿ ಹೀಗೆ ಆಗಬಾರದಿತ್ತು.ಮುಂಜಾಗೃತೆಯಿಂದ ಕಾರ್ಯಸ್ಥಳಗಳು ಇರಬೇಕು.ಇದು ಖಂಡನೀಯ ವಿಚಾರವಾಗಿದೆ.ಕುಟುಂಬದವ್ರು ನೊಂದಿದ್ದಾರೆ.ತಕ್ಕ ತನಿಖೆ, ಸೂಕ್ತ ಕ್ರಮ ಆಗಬೇಕು.ಇಂತಹ ಘಟನೆಗಳು ಮರುಕಳಿಸಬಾರದು ಅಶ್ವಥ್ ನಾರಾಯಣ್ ಹೇಳಿದ್ದಾರೆ.