ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಬರುವ ವಿವಿಧ ಅಕಾಡೆಮಿಗಳ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರು ಹಾಗೂ ಸದಸ್ಯರ ನೇಮಕಾತಿಗೆ,
ಸಂಬಂಧಪಟ್ಟಂತೆ ಖಾಲಿಯಿರುವ ಕೆಲವು ಅಕಾಡೆಮಿಗಳ ಅಧ್ಯಕ್ಷ ಸ್ಥಾನಕ್ಕೆ ಹೊಸ ಅಧ್ಯಕ್ಷರನ್ನು ಹಾಗೂ ಹಲವು ಅಕಾಡೆಮಿಗಳಲ್ಲಿ ರಂಗ ಸಮಾಜದಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ ಸದಸ್ಯರನ್ನು ಕೈಬಿಟ್ಟು ಅವರ ಸ್ಥಾನದಲ್ಲಿ ಹೊಸ ಸದಸ್ಯರನ್ನು ನೇಮಕ ಮಾಡಿದೆ.
ಬಾಗಲಕೋಟೆಯ ಕರ್ನಾಟಕ ಬಯಲಾಟ ಅಕಾಡೆಮಿಗೆ ಅಜಿತ್ ಬಸಾಪುರ ನೂತನ ಅಧ್ಯಕ್ಷರಾಗಿದ್ದು, ತಿಪ್ಪೇಸ್ವಾಮಿ ಹಾಗೂ ದತ್ತಾತ್ರೇಯ ಅರಳಿಕಟ್ಟಿ ನೂತನ ಸದಸ್ಯರಾಗಿದ್ದಾರೆ.
ಬೆಂಗಳೂರಿನ ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಶ್ರೀರಾಮಗೌತಮ್, ಗುರುಸಿದ್ದಪ್ಪ, ಕಮಲ್ ಅಹಮ್ಮದ್, ಶಿಲ್ಪಾ ಕಡಕಭಾವಿ ಅವರನ್ನು ಹೊಸದಾಗಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಮಂಗಳೂರಿನ ಕೊಂಕಣ ಸಾಹಿತ್ಯ ಅಕಾಡೆಮಿಗೆ ಓಂ ಗಣೇಶ್ ಹಾಗೂ ರಮೇಶ್ ಪುರಸಯ್ಯ ಅವರನ್ನು ಹೊಸದಾಗಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಮಂಗಳೂರಿನ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಸದಸ್ಯರಾಗಿ ಅಬ್ದುಲ್ ರಹಿಮಾನ್, ಹೈದರಾಲಿ, ಎಂ.ಕೆ.ಮಠ, ಮಹಮ್ಮದ್ ಮುಸ್ತಫಾ ಆಯ್ಕೆ ಆಗಿದ್ದಾರೆ.