ರಾಜ್ಯದಲ್ಲಿ ಪೋಡಿ ಮುಕ್ತ ಅಭಿಯಾನ ಯೋಜನೆಯ ಅನುಷ್ಟಾನಕ್ಕೆ 3000 ಭೂಮಾಪಕರನ್ನು ನೇಮಕಾತಿ ಮಾಡಲು ಕಂದಾಯ ಇಲಾಖೆ ಅಧಿಸೂಚನೆ ಹೊರಡಿಸಿದೆ.ಇದಕ್ಕೂ ಮೊದಲು ಹೊರಡಿಸಲಾಗಿದ್ದ ನೇಮಕಾತಿ ಅಧಿಸೂಚನೆಯ ಜಾರಿಗೆ ಸರ್ಕಾರ ತಡೆ ಹಿಡಿದಿತ್ತು. ಇದೀಗ ನೇಮಕಾತಿಗೆ ಮತ್ತೆ ಚಾಲನೆ ದೊರೆತಿದೆ.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜನವರಿ 21, 2022 ಕಡೇ ದಿನಾಂಕವಾಗಿದೆ. ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದೆ.
ವಿದ್ಯಾರ್ಹತೆ: ಪಿಯುಸಿ (ವಿಜ್ಞಾನ ನಿಕಾಯ)ಯಲ್ಲಿ ಗಣಿತದಲ್ಲಿ ಶೇ. 60ರಷ್ಟು ಅಂಕ ಪಡೆದು ಉತ್ತೀರ್ಣರಾಗಿರಬೇಕು. ಅಥವಾ ಬಿ.ಇ. ಅಥವಾ ಸರ್ವೇ ಟ್ರೇಡ್‌ನಲ್ಲಿ ಐಟಿಐ ಡಿಪ್ಲೊಮಾ ಮಾಡಿರಬೇಕು.
ವಯೋಮಿತಿ: ಕನಿಷ್ಟ 18ರಿಂದ ಗರಿಷ್ಟ 65 ವರ್ಷಗಳು.
ಅರ್ಜಿ ಶುಲ್ಕ: ಅಭ್ಯರ್ಥಿಗಳು ನಾಡ ಕಚೇರಿಯ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ತಮ್ಮ ಚುನಾವಣಾ ಗುರುತಿನ ಚೀಟಿ / ಆಧಾರ್ ತೋರಿಸಿ ರೂ. 1000/- ಶುಲ್ಕ ಪಾವತಿಸಬೇಕು. ವಿಶಿಷ್ಟ ಅರ್ಜಿ ಸಂಖ್ಯೆ ಸ್ವೀಕೃತಿ ಪಡೆದು ಆ ಅರ್ಜಿ ಸಂಖ್ಯೆಯನ್ನು ಬಳಸಿ ಆನ್‌ಲೈನ್‌ನಲ್ಲಿ ಅರ್ಜಿ ತೆರೆಯಬೇಕು.