Select Your Language

Notifications

webdunia
webdunia
webdunia
webdunia

ಕೆಪಿಎಸ್‌ಸಿಗೆ ಶ್ಯಾಂಭಟ್ ನೇಮಕ ಸೂಕ್ತವಲ್ಲ: ಪೂಜಾರಿ

ಕೆಪಿಎಸ್‌ಸಿಗೆ ಶ್ಯಾಂಭಟ್ ನೇಮಕ ಸೂಕ್ತವಲ್ಲ: ಪೂಜಾರಿ
ಬೆಂಗಳೂರು , ಸೋಮವಾರ, 8 ಆಗಸ್ಟ್ 2016 (16:16 IST)
ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರಾಗಿ ಶ್ಯಾಂಭಟ್ ಅವರನ್ನು ನೇಮಕ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡ ಜನಾರ್ಧನ ಪೂಚಾರಿ ಅಭಿಪ್ರಾಯಪಟ್ಟಿದ್ದಾರೆ. 
 
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ಆರೋಪ ಹೊತ್ತಿರುವ ಶ್ಯಾಂಭಟ್ ಅವರನ್ನು ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷರಾಗಿ ನೇಮಕ ಮಾಡುವುದು ಸರಿಯಲ್ಲ. ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತೆ ತಪ್ಪು ಮಾಡುತ್ತಿದ್ದಾರೆ ಎಂದು ಹೇಳಿದರು.
 
ಒಂದು ವೇಳೆ ಕೆಪಿಎಸ್‌ಸಿ ಅಧ್ಯಕ್ಷರಾಗಿ ಶ್ಯಾಂಭಟ್ ಅವರನ್ನು ನೇಮಕ ಮಾಡಿದ್ದರೆ, ತಕ್ಷಣವೇ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಕಾಂಗ್ರೆಸ್ ಮುಖಂಡ ಜನಾರ್ಧನ ಪೂಚಾರಿ ಆಗ್ರಹಿಸಿದ್ದಾರೆ. 
 
ಬಿಡಿಎ ಆಯುಕ್ತ ಶ್ಯಾಂ ಭಟ್ ಅವರು ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಭ್ರಷ್ಟಾಚಾರ ಸೇರಿದಂತೆ ಕರ್ತವ್ಯ ಲೋಪ ಆರೋಪವನ್ನು ಎದುರಿಸುತ್ತಿದ್ದಾರೆ. ಈ ವ್ಯಕ್ತಿ  ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಹರಲ್ಲ. ಇಂತಹ ಆರೋಪ ಹೊತ್ತಿರುವವರನ್ನು ಅಧ್ಯಕ್ಷರಾಗಿ ನೇಮಕ ಮಾಡುವುದರಿಂದ ಸರಕಾರ ತೀವ್ರ ಮುಜುಗರಕ್ಕೊಳಗಾಗುತ್ತದೆ ಎಂದು ಪ್ರಜ್ಞಾವಂತ ನಾಗರಿಕ ಕಳಕಳಿ ಸಂಸ್ಥೆಯ (ಎಸಿಐಸಿಎಂ) ಸಂಚಾಲಕ ಲಕ್ಷಣ್, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರತ್ರ ಬರೆದಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಗರ್ ಹುಕುಂ ವಿಳಂಬ: ಅಧಿಕಾರಿಗಳ ವಿರುದ್ಧ ಸಚಿವ ಕಾಗೋಡು ಗರಂ