ಬಿಬಿಎಂಪಿ ರಸ್ತೆಗಳನ್ನ ಅಭಿವೃದ್ಧಿ ಪಡಿಸುವಲ್ಲಿ ಮರಗಳನ್ನ ಕಡಿದು ಕಾಮಗಾರಿಯನ್ನ ಮುಂದುವರೆಸಿತ್ತು. ಇದ್ರಿಂದ ಸರ‍್ವಜನಿಕರು ಮತ್ತು ಪರಿಸರವಾದಿಗಳು ಬಿಬಿಎಂಪಿ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಿದ್ರು, ಆದ್ರೆ ಇದೀಗ ಮರಗಳನ್ನು ಉಳಿಸಿಕೊಳ್ಳಲು ಬಿಬಿಎಂಪಿ ಹೊಸಾ ಪ್ಲಾನ್ ಒಂದನ್ನ ರೆಡಿ ಮಾಡಿದೆ. ಸಿಲಿಕಾನ್ ಸಿಟಿ ಯಲ್ಲಿ ಆಭಿವೃಧ್ಧಿ ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿತ್ತು , ಸಿಲಿಕಾನ್ ಸಿಟಿಯನ್ನ ಸ್ಮರ‍್ಟ್ ಸಿಟಿ ಮಾಡುವ ಆತುರದಲ್ಲಿ ನೂರಾರು ಮರಗಳಿಗೆ ಕೊಡಲಿಯನ್ನ ಹಾಕಿತ್ತು ಬಿಬಿಎಂಪಿ. ಇದ್ರಿಂದ ಎಲ್ಲೆಡೆ ಸರ‍್ವಜನಿಕರು ಮತ್ತು ಪರಿಸರವಾದಿಗಳು ಬಿಬಿಎಂಪಿ ವಿರುದ್ಧ ಆಕ್ರೋಶವನ್ನ ವ್ಯಕ್ತ ಪಡಿಸಿದ್ರು.
ಇದರಿಂದಾಗಿ ಮರಗಳಮನ್ನು ಕಡಿಯುವುದರ ಬದಲು ಮರಗಳನ್ನು ಸ್ಥಳಾಂತರಿಸಲು ಬಿಬಿಎಂಪಿ ಹೊಸಾ ಪ್ಲಾನ್ ರೆಡಿಮಾಡಿದ್ದು, ಮರಗಳ ಸ್ಥಳಾಂತರಕ್ಕೆ ಖಾಸಗಿ ಸಂಸ್ಥೆಗಳನ್ನು ನೇಮಕ ಮಾಡಲು ಬಿಬಿಎಂಪಿ ಅರಣ್ಯ ಅರಣ್ಯ ವಿಭಾಗ ಸಜ್ಜಾಗಿದೆ.ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಗಾಗಿ ಬಿಬಿಎಂಪಿ ಹಲವು ರಸ್ತೆಗಳ ಅಗಲೀಕರಣ ಕಾಮಗಾರಿಗಳನ್ನ ಕೈಗೆತ್ತುಕೊಂಡಿದ್ದು, ನೂರಾರು ಮರಗಳನ್ನ ಕಡಿಯುವ ಪರಿಸ್ಥಿತಿ ಎದುರಾಗಿತ್ತು, ಆದರೆ ಮರಗಳನ್ನ ಕಡಿಯುವ ಕುರಿತಂತೆ ಸರ‍್ವಜನಿಕರು ಮತ್ತು ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗ್ತಿದ್ದರಿಂದ ಮರಗಳನ್ನು ಕಡಿಯುವ ಬದಲು ಸ್ಥಳಾಂತರಿಸಲು ಬಿಬಿಎಂಪಿ ಅರಣ್ಯ ಇಲಾಖೆ ಖಾಸಗಿ ಸಂಸ್ಥೆಗೆ ವಹಿಸಲು ಮುಂದಾಗಿದೆ.ಇನ್ನು ಅರಣ್ಯ ವಿಭಾಗ ರೂಪಿಸಿರುವ ಯೋಜನೆಯಂತೆ 0.1 ರಿಂದ 0.99 ಮೀ ಸುತ್ತಳತೆಯ ಮರಗಳು ಹಾಗೂ 1 ರಿಂದ 1.99 ಮೀ ಸುತ್ತಳತೆಯ ಮರಗಳ ಆರೋಗ್ಯವನ್ನು ಗಮನಿಸಿ ಸ್ಥಳಾಂತರಿಸಲಾಗುತ್ತಿದೆ.ಇದಕ್ಕೆ ಸಂಭಂದಿಸಿದಂತೆ 3 ಪ್ಯಯಾಕೇಜ್ ಗಳ ಟೆಂಡರೆಗಳನ್ನ ಆಹ್ವಾನಿರಲಾಗಿದೆ. ಗುತ್ತಿಗೆ ಪಡೆದವರು ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 50 ಮರಗಳನ್ನು ಸ್ಥಳಾಂತರಿಸಿ ಅವುಗಳನ್ನು ನರ‍್ದಿಷ್ಟ ಅವಧಿಯವರೆಗೆ ನರ‍್ವಹಣೆ ಮಾಡಬೇಕಾಗಿದೆ.