Select Your Language

Notifications

webdunia
webdunia
webdunia
webdunia

ಐಎಎಸ್ ಅಧಿಕಾರಿ ಅನುರಾಗ್‌ ತಿವಾರಿ ಸಾವು: ಹರ್ಷಗುಪ್ತಾ ಸ್ಪಷ್ಟನೆ

ಐಎಎಸ್ ಅಧಿಕಾರಿ ಅನುರಾಗ್‌ ತಿವಾರಿ ಸಾವು: ಹರ್ಷಗುಪ್ತಾ ಸ್ಪಷ್ಟನೆ
ಬೆಂಗಳೂರು , ಶನಿವಾರ, 20 ಮೇ 2017 (15:36 IST)
ಹಿರಿಯ ಐಎಎಸ್ ಅದಿಕಾರಿ ಆಹಾರ ಇಲಾಖೆಯ ಆಯುಕ್ತರಾಗಿದ್ದ ಅನುರಾಗ್ ತಿವಾರಿ ಸಾವಿನ ಪ್ರಕರಣ ಕುರಿತಂತೆ ನನ್ನ ವಿರುದ್ಧ ಬಂದಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಹರ್ಷಗುಪ್ತಾ ಹೇಳಿದ್ದಾರೆ.
 
ಅನುರಾಗ್ ತಿವಾರಿ ಸಾವಿನ ಪ್ರಕರಣದಲ್ಲಿ ನನ್ನ ಹೆಸರು ಏಕೆ ಥಳಕು ಹಾಕಲಾಗುತ್ತದೆ. ಅಧಿಕಾರಿ ವಿರುದ್ಧ ಆರೋಪಿಸುವ ಮುನ್ನ ಯೋಚಿಸಬೇಕು. ಇಲ್ಲದಿದ್ದರೆ ಅಡಳಿತ ನಡೆಸುವುದು ಕಷ್ಟವಾಗುತ್ತದೆ. ಬೇರೆ ಇಲಾಖೆಯಲ್ಲೂ ಅಡಳಿತ ನಡೆಸುವುದು ತೊಂದರೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
 
ಆಹಾರ ಸರಬರಾಜು ಇಲಾಖೆಯಲ್ಲಿ 2 ಸಾವಿರ ಕೋಟಿ ಹಗರಣ ನಡೆದಿಲ್ಲ. ಆಯುಕ್ತರ ಬಳಿ ಮಾಹಿತಿ ಸಂಗ್ರಹಿಸಿದ್ದೇವೆ. ಒಂದು ವೇಳೆ ಅಂತಹ ಹಗರಣ ನಡೆದಿದ್ದರೆ ಲಿಖಿತ ರೂಪದಲ್ಲಿ ದಾಖಲೆಗಳು ಸಿಗಬೇಕಾಗಿತ್ತು ಎಂದು ತಿಳಿಸಿದ್ದಾರೆ.
 
ಅನುರಾಗ್ ತಿವಾರಿ ಒಳ್ಳೆಯ ಸಹದ್ಯೋಗಿ, ಪ್ರಾಮಾಣಿಕ ಅಧಿಕಾರಿ ಅವರ ಸಾವಿನ ಬಗ್ಗೆ ನನಗೆ ತುಂಬಾ ದುಖಃವಾಗಿದೆ. ಒಬ್ಬ ದಕ್ಷ ಅಧಿಕಾರಿಯನ್ನು ರಾಜ್ಯ ಕಳೆದುಕೊಂಡಿದೆ ಎಂದರು.
 
ಆಹಾರ ಸರಬರಾಜು ಇಲಾಖೆಯಲ್ಲಿ ಬೋಗಸ್ ಕಾರ್ಡ್ ಹಾವಳಿಯನ್ನು ತಡೆದಿದ್ದೇವೆ. ಇಲಾಖೆಯಲ್ಲಿ ಪಾರದರ್ಶಕತೆಯನ್ನು ತಂದಿದ್ದೇವೆ ಎಂದು ಆಹಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ದಲಿತರ ಮನೆಯಲ್ಲಿ ಉಪಹಾರ ಸೇವನೆ: ಬಿಎಸ್‌ವೈ ವಿರುದ್ಧ ದೂರು