ಮಾಜಿ ಡಿವೈಎಸ್‌ಪಿ ಅನುಪಮಾ ಶೆಣೈ ವಿಚಾರವಾಗಿ ಸ್ಪಷ್ಟನೆ ನೀಡುವಂತೆ ಕೋರಿ ಕೇಂದ್ರ ಗೃಹ ಇಲಾಖೆ ರಾಜ್ಯ ಸರಕಾರಕ್ಕೆ ಪತ್ರ ಬರೆದಿದೆ.
ಕಳೆದ ತಿಂಗಳು ಡಿವೈಎಸ್‌ಪಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಹೋಗಿದ್ದ ಅನುಪಮಾ ಶೆಣೈ ದೂರವಾಣಿ ಸಂಭಾಷಣೆಯನ್ನು ಆಧಾರವಾಗಿಟ್ಟುಕೊಂಡು ಕೇಂದ್ರ ಗೃಹ ಸಚಿವರಿಗೆ ದೂರು ಸಲ್ಲಿಸಿದ್ದರು.
ಕರ್ತವ್ಯಕ್ಕೆ ಸಂಬಂಧಿಸಿದಂತೆ ನೈತಿಕತೆ ಕುಂದಿಸಿದ ಆರೋಪವನ್ನು ಮಾಡಿದ್ದವರು ರಾಜ್ಯ ಸರಕಾರ, ಸಚಿವ ಪರಮೇಶ್ವರ್ ನಾಯ್ಕ, ಡಿಜಿಪಿ ಓಂ ಪ್ರಕಾಶ್ ಹಾಗೂ ಬಳ್ಳಾರಿ ಐಜಿಪಿ ಮುರುಗನ್ ವಿರುದ್ಧ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ದೂರು ಸಲ್ಲಿಸಿದ್ದರು.
ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ ಕಿರುಕುಳಕ್ಕೆ ಬೇಸತ್ತು ಅನುಪಮಾ ಶೆಣೈ ಅವರು ಜೂನ್ 4 ರಂದು ಡಿವೈಎಸ್‌ಪಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .