ಮಂಡ್ಯದಲ್ಲಿ ಮತ್ತೊಂದು ದುರಂತ; ವಿಸಿ ನಾಲೆಗೆ ಬಿದ್ದು ಒಂದೇ ಕುಟುಂಬದ ಮೂವರ ಸಾವು

Webdunia
ಸೋಮವಾರ, 3 ಡಿಸೆಂಬರ್ 2018 (07:15 IST)
ಮಂಡ್ಯ : ಇತ್ತೀಚೆಗೆ ನಡೆದ ಮಂಡ್ಯದ ಪಾಂಡವಪುರ ಕನಗನಮರಡಿ ಗ್ರಾಮದಲ್ಲಿ ಬಸ್ ನಾಲೆಗೆ ಉರುಳಿ 30 ಜನ ಸಾವನ್ನಪ್ಪಿದ ದುರಂತದ ನೋವು ಇನ್ನು ಮಾಸಿಲ್ಲ, ಅದರ  ಬೆನ್ನಲೇ ಇದೀಗ ನಾಲೆಗೆ ಸ್ಕೂಟರ್ ಬಿದ್ದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲೂಕಿನ ಲೋಕಸರ ಗ್ರಾಮದ ಬಳಿ ನಡೆದಿದೆ.


ಲೋಕಸರ ಗ್ರಾಮದ ನಿವಾಸಿಗಳಾದ ನಾಗಮ್ಮ (50), ಅಂಬಿಕಾ (30), ಮಾನ್ಯತಾ (6) ಮೃತ ದುರ್ದೈವಿಗಳಾಗಿದ್ದು, ಭಾನುವಾರ ರಾತ್ರಿ 8.30 ರ ಸುಮಾರಿಗೆ ಲೋಕಸರ ಗ್ರಾಮದ ಸಮೀಪದ ಮಹದೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡಲೆಂದು ಅಂಬಿಕಾ, ತನ್ನ ತಾಯಿ ನಾಗಮ್ಮ ಮತ್ತು ತಂಗಿಯ ಮಗಳು ಮಾನ್ಯತಾಳನ್ನು ಸ್ಕೂಟರ್‌ನಲ್ಲಿ ಕರೆದುಕೊಂಡು ಹೋಗಿದ್ದರು. ಪೂಜೆ ಮುಗಿಸಿ ವಾಪಾಸಾಗುವ ವೇಳೆ ತಿರುವಿನಲ್ಲಿ ಆಯತಪ್ಪಿ ಮೂವರು ತುಂಬಿ ಹರಿಯುತ್ತಿದ್ದ ವಿಸಿ ನಾಲೆಯೊಳಗೆ ಬಿದ್ದಿದ್ದಾರೆ.


ಕೂಡಲೇ ಸ್ಥಳೀಯರು ಮೂವರನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಸಿದ್ದರು ಕೂಡ ಬಾಲಕಿ ಮಾನ್ಯತಾ ಸ್ಥಳದಲ್ಲೇ ಸಾವನ್ನಪ್ಪಿದಳು. ಹಾಗೇ ನಾಗಮ್ಮ ಹಾಗೂ ಅಂಬಿಕಾ  ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲೇ ಸಾವನಪ್ಪಿದ್ದಾರೆ.
ಸ್ಥಳಕ್ಕೆ ಮಂಡ್ಯ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ ಮೃತರ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರುಬೈಯಾ ಸಯೀದ್ ಅಪಹರಣ ಪ್ರಕರಣದಲ್ಲಿ ಶಂಕಿತನ ಬಂಧನ, ಏನಿದು ಕೇಸ್

ಸಿದ್ದರಾಮಯ್ಯ ಸರ್ಕಾರದಿಂದ ರೈತರ ಅಸಡ್ಡೆ: ಬಿವೈ ವಿಜಯೇಂದ್ರ

ನಾಳೆ ಡಿಕೆ ಶಿವಕುಮಾರ್ ಮನೆಯಲ್ಲಿ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್‌, ಕುತೂಹಲ ಮೂಡಿಸಿದ ನಾಯಕರ ನಡೆ

ವಿಪಕ್ಷಗಳ ಗದ್ದಲಕ್ಕೆ ಸತತ ಸೋಲು ಕಾರಣ: ಕಂಗನಾ ರಣಾವತ್ ಕಿಡಿ

ಪ್ರತಾಪ್ ಸಿಂಹ, ಯತ್ನಾಳ್ ವಿರುದ್ಧ ನಾಲಿಗೆ ಹರಿಬಿಟ್ಟ ಎಸ್‌ಡಿಪಿಐ ಮುಖಂಡನ ವಿರುದ್ಧ ದೂರು

ಮುಂದಿನ ಸುದ್ದಿ
Show comments