Select Your Language

Notifications

webdunia
webdunia
webdunia
webdunia

ತಿರುಮಲ-ತಿರುಪತಿ ಕಾಲುದಾರಿಯಲ್ಲಿ ಮತ್ತೊಂದು ಚಿರತೆ ಸೆರೆ

Tirupati footpath
ತಿರುಮಲ , ಶುಕ್ರವಾರ, 8 ಸೆಪ್ಟಂಬರ್ 2023 (15:40 IST)
ತಿರುಮಲ ತಿರುಪತಿ ಕಾಲುದಾರಿಯ ನರಸಿಂಹಸ್ವಾಮಿ ದೇವಸ್ಥಾನದ ಬಳಿ 5ನೇ ಚಿರತೆ ಸೆರೆ ಹಿಡಿಯಲಾಗಿದೆ. 4 ದಿನದಿಂದ ಟ್ರ್ಯಾಪ್ ಕ್ಯಾಮರಾ ಮೂಲಕ ಚಿರತೆ ಚಲನವಲನ ಪತ್ತೆ ಮಾಡಲಾಗುತ್ತಿತ್ತು, ಸಿಬ್ಬಂದಿ ನರಸಿಂಹಸ್ವಾಮಿ ದೇವಸ್ಥಾನದ ಬಳಿ ಬೋನ್ ಇಟ್ಟಿದ್ದರು, ಅರಣ್ಯ ಸಿಬ್ಬಂದಿ ಗಂಡು ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರದೇಶದಲ್ಲಿ ಚಿರತೆ ಸಂಕುಲವನ್ನು ನಿಯಂತ್ರಿಸುವ ಪ್ರಯತ್ನದ ಭಾಗವಾಗಿ ಅಲಿಪಿರಿ ಪಾದಚಾರಿ ಮಾರ್ಗದ ಉದ್ದಕ್ಕೂ ಬೋನ್‌ಗಳನ್ನು ಬಳಸಲಾಗಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ ಟ್ರ್ಯಾಪ್ ಕ್ಯಾಮೆರಾದಲ್ಲಿ ಚಿರತೆಯ ಇರುವಿಕೆಯನ್ನು ಪತ್ತೆಹಚ್ಚಲಾಗಿತ್ತು. ಇದಕ್ಕೆ ಸ್ಪಂದಿಸಿದ ತಿರುಮಲ ತಿರುಪತಿ ದೇವಸ್ಥಾನದ ಅಧಿಕಾರಿಗಳು ಮತ್ತು ಅರಣ್ಯ ಸಿಬ್ಬಂದಿಗಳು ಕೂಡಲೇ ಸುತ್ತಮುತ್ತ ಬೋನನ್ನು ಅಳವಡಿಸಿ ರಾತ್ರಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡಿನಲ್ಲಿ ಐಸಿಸ್ ಉಗ್ರ ಸೈಯದ್ ನಬೀಲ್ ಬಂಧನ