Select Your Language

Notifications

webdunia
webdunia
webdunia
webdunia

ಅನ್ನದಾತರಿಗೆ ಸಿಹಿಸುದ್ದಿ: ಬೆಳೆಹಾನಿಗೆ ಯಾವ ಬೆಳೆಗೆ ಎಷ್ಟು ಪರಿಹಾರ ಗೊತ್ತಾ..?

ಅನ್ನದಾತರಿಗೆ ಸಿಹಿಸುದ್ದಿ: ಬೆಳೆಹಾನಿಗೆ  ಯಾವ ಬೆಳೆಗೆ ಎಷ್ಟು ಪರಿಹಾರ ಗೊತ್ತಾ..?
bangalore , ಮಂಗಳವಾರ, 8 ಫೆಬ್ರವರಿ 2022 (20:56 IST)
ಬೆಂಗಳೂರು: ಬೆಳೆಹಾನಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರವನ್ನು ಪ್ರಕಟಿಸಿದ್ದು, ಮುಂದಿನ 2-3 ದಿನಗಳಲ್ಲಿ ಪರಿಹಾರ ಹಂಚಿಕೆ ಆರಂಭವಾಗಲಿದೆ, 18.2 ಲಕ್ಷ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಆಗಲಿದೆ.
ಇನ್ನು, ಸಿಎಂ ಬಸವರಾಜ್ ಬೊಮ್ಮಾಯಿ ಡಿಸೆಂಬರ್ 21ರಂದು ಪರಿಹಾರದ ಭರವಸೆ ನೀಡಿದ್ದು, 1200 ಕೋಟಿ ರೂ.ಹಣವನ್ನು ಸರ್ಕಾರ ಬಿಡುಗಡೆ ಮಾಡಲು ಮುಂದಾಗಿದೆ. ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದಾಗಿ 14 ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಪೈರು ಹಾನಿಯಿಂದಾಗಿ ರೈತರಿಗೆ ನಷ್ಟವಾಗಿದೆ.
 
ಯಾವ ಬೆಳೆಗೆ ಎಷ್ಟು ಪರಿಹಾರ..?
ಬೆಳೆಹಾನಿಗೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ಘೋಷಿಸಿದ್ದು, ಯಾವ ಬೆಳೆಗೆ ಎಷ್ಟು ಪರಿಹಾರ ಎಂಬುದು ಇಲ್ಲಿದೆ.
ಒಣ ಬೇಸಾಯ ಭೂಮಿ (1 ಹೆಕ್ಟೇರ್)- 6800+ ಹೆಚ್ಚುವರಿ 6800= 13,600
ನೀರಾವರಿ ಜಮೀನು- 13,500 + 11,500= 25,000
ತೋಟಗಾರಿಕಾ ಬೆಳೆ- 18,000 + 10,000 = 28,000
ಇನ್ನು, 18.2 ಲಕ್ಷ ರೈತರಿಗೆ 1200 ಕೋಟಿ ರೂ. ನೇರವಾಗಿ ಬ್ಯಾಂಕ್ ಖಾತೆಗಳಿಗೆ 3 ದಿನದಲ್ಲಿ ಪಾವತಿಯಾಗಲಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳಂತೆ ಒಣ ಬೇಸಾಯ ಭೂಮಿಗೆ 6800 ರೂ, ನೀರಾವರಿ ಜಮೀನಿಗೆ 13,500 ರೂ, ತೋಟಗಾರಿಕೆ ಬೆಳೆಗೆ 18 ಸಾವಿರ ರೂ. ಸೇರಿ ಒಟ್ಟಾರೆ 1252 ಕೋಟಿ ರೂ. ಪರಿಹಾರ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್-ಕೇಸರಿ ಶಾಲು ವಿವಾದ: ಮಾಜಿ ಪ್ರಧಾನಿ ಹೇಳಿದ್ದೇನು.?