ಆಂಧ್ರದಲ್ಲಿ ಇಬ್ಬರು ಹೆಂಡಿರ ಮುಂದಿನ ಗಂಡ..!!

Webdunia
ಗುರುವಾರ, 22 ಸೆಪ್ಟಂಬರ್ 2022 (16:48 IST)
ಇಬ್ಬರಿಗೂ ಪರಸ್ಪರ ಪರಿಚಯವಾಗಿ, ಪ್ರೀತಿ ಚಿಗುರೊಡೆದಿತ್ತು. ಆದರೆ, ಯಾವುದೋ ಕಾರಣಕ್ಕೆ ಈ ಇಬ್ಬರೂ ದೂರ ದೂರವಿದ್ದರು.
 
ಸುಮಾರು ವರ್ಷಗಳ ನಂತರ ಆ ಪ್ರಿಯತಮೆ ತನ್ನ ಪ್ರೇಮಿಯನ್ನು ಹುಡುಕಿಕೊಂಡು ಬಂದಳು. ಆದರೆ, ಆಕೆಗೆ ಶಾಕ್​ ಕಾದಿತ್ತು. ಕಾರಣ ಆಕೆಯ ಪ್ರೇಮಿ ಮದುವೆಯ ಬಂಧನಕ್ಕೆ ಸಿಲುಕಿದ್ದ. ಇದನ್ನು ಕೇಳಿ ಅರಗಿಸಿಕೊಳ್ಳಲಾಗದ ಪ್ರಿಯತಮೆ ಕಣ್ಣೀರಿಟ್ಟಳು.
 
ಈ ವಿಷಯ ತಿಳಿದ ಆತನ ಹೆಂಡತಿಗೂ ದಿಗ್ಭ್ರಮೆಯಾಗಿತ್ತು. ಕಾರಣ ತನ್ನ ಗಂಡ ಇನ್ನೊಬ್ಬಾಕೆ ಜೊತೆ ಪ್ರೇಮ ಸಂಬಂಧ ಹೊಂದಿದ್ದ ಎಂಬುದು ಆಕೆಗೆ ನುಂಗಲಾರದ ತುತ್ತಾಗಿತ್ತು. ಕಾರಣ ಆಕೆಯೂ ಆತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇಬ್ಬರನ್ನೂ ಒಂದುಗೂಡಿಸಿದ್ದು ಇದೇ ಟಿಕ್​ಟಾಕ್​. ಆದರೀಗ ಇನ್ನೊಬ್ಬ ಪ್ರಿಯತಮೆಯ ಎಂಟ್ರಿ ಸಂದಿಗ್ಧತೆ ಸೃಷ್ಟಿಸಿತ್ತು.
ಮದುವೆಯಾಗಿದ್ದರೂ ಪ್ರೀತಿ ಕೇಳಿ ಬಂದ ಪ್ರಿಯತಮೆಗೆ ಪ್ರೀತಿಯ ಗುಂಗು ಹೋಗಲಿಲ್ಲ. ಇತ್ತ ಗಂಡನ ಬಿಟ್ಟು ಕೊಡಲು ಹೆಂಡತಿ ಒಪ್ಪಿಗೆಯೂ ಇರಲಿಲ್ಲ. ಬಳಿಕ ಮೂವರೂ ಒಟ್ಟಿಗೆ ಕುಳಿತು ಚರ್ಚಿಸಿಕೊಂಡು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅದು ಮೂವರೂ ಒಟ್ಟಿಗೆ ಬದುಕಲು ನಿಶ್ವಯಿಸಿದ್ದಾರೆ.
 
ಈ ಬಗ್ಗೆ ಪತಿಯೊಂದಿಗೆ ಮಾತನಾಡಿದ ಹೆಂಡತಿ ಪ್ರಿಯತಮೆಯನ್ನು ಮದುವೆಯಾಗಲು ಒಪ್ಪಿಗೆ ನೀಡಿದ್ದಾಳೆ. ಒಂದೆಡೆ ಪ್ರಿಯತಮೆ, ಇನ್ನೊಂದೆಡೆ ಹೆಂಡತಿ ಇಬ್ಬರೂ ಒಪ್ಪಿ ತನ್ನೊಂದಿಗೆ ಬದುಕಲು ಸಿದ್ಧರಾಗಿದ್ದಾಗ ಆತ ಇದಕ್ಕೆ ಸಮ್ಮತಿಸಿದ್ದಾನೆ. ಮೊದಲ ಹೆಂಡತಿಯ ಒಪ್ಪಿಗೆಯ ಮೇರೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ಆತ ಪ್ರಿಯತಮೆಯನ್ನು ವರಿಸಿದ್ದಾನೆ. ಇಲ್ಲಿಗೆ ತ್ರಿಕೋನ ಪ್ರೇಮಕಥೆ ಸುಖಾಂತ್ಯ ಕಂಡಿದೆ.
 
ಸಿನಿಮಾ ಕಥೆಯಂತಿರುವ ಇದು ನಡೆದಿದ್ದು ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ. ಮೊದಲ ಪತ್ನಿ ವಿಶಾಖಪಟ್ಟಣದವರಾಗಿದ್ದರೆ, ಎರಡನೇ ಆಕೆ ಕಡಪ ಮೂಲದವರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾಚ್ ಪ್ರಶ್ನೆಯೆತ್ತಿದ ನಾರಾಯಣಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ ಪ್ರತಿಕ್ರಿಯೆ

ಸರ್ದಾರ್ ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಧನ ಕದಿಯುತ್ತಿದ್ದ ಇಬ್ಬರ ಬಂಧನ

ಭಾರತಕ್ಕೆ ಬಂದಿಳಿದ ಪುಟಿನ್,ಅಪ್ಪುಗೆಯೊಂದಿಗೆ ಸ್ವಾಗತಿಸಿದ ನರೇಂದ್ರ ಮೋದಿ

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಪತಿ ಸ್ವರಾಜ್ ಕೌಶಲ್ ನಿಧನ, ಪುತ್ರಿ ಭಾವನಾತ್ಮಕ ಪೋಸ್ಟ್‌

ನಿಮ್ಮ ಸಮಯ ಸರಿ ಇದ್ದರೆ ವಾಚ್ ವಿಷಯ ಬರುತ್ತಿರಲಿಲ್ಲ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ಮುಂದಿನ ಸುದ್ದಿ
Show comments