Publish Date: Thu, 04 Jan 2018 (19:07 IST)
Updated Date: Thu, 04 Jan 2018 (19:11 IST)
ಮಂಗಳೂರಿನಲ್ಲಿ ಕೊಲೆಯಾಗಿರುವ ದೀಪಕ್ ರಾವ್ ಹತ್ಯೆಗೆ ಕಿಡಿಕಾರಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ರಕ್ತ ಸಿಕ್ತ ಹಸ್ತದ ಗುರುತಿನ ಚಿತ್ರದ ಮೇಲೆ ಕಿಲ್ಲರ್ ಕಾಂಗ್ರೆಸ್ ಎಂದು ಟ್ವಿಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಇಸ್ಲಾಮಿಕ್ ಸ್ಟೇಟ್ ಪ್ರಾಯೋಜಕತ್ವದಲ್ಲಿ ಅವರ ಆಳ್ವಿಕೆಯಲ್ಲಿ ಪ್ರತಿ ಮೂರು ತಿಂಗಳಿಗೊಬ್ಬರಂತೆ ಹಿಂದೂ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ ಎಂದು ಆರೋಪಿಸಿದ್ದಾರೆ.
ಇನ್ನು ಮುಂದುವರೆದು ಕರ್ನಾಟಕದ ಮುಖ್ಯಮಂತ್ರಿ ಈ ಅಂಕೆ ಅಂಶಗಳನ್ನು ಹೆಮ್ಮೆಯಿಂದ ಜಾಹಿರಾತಿನಲ್ಲಿ ಬಳಸಿಕೊಂಡು ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲಿದ್ದಾರೆ ಎಂದು ಟ್ವಿಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.