Select Your Language

Notifications

webdunia
webdunia
webdunia
webdunia

ಒಂದೇ ವರ್ಷದಲ್ಲಿ ಆರು ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳ ಜೀವನ ಉಳಿಸಿದ ಸಂಸ್ಥೆ

ಒಂದೇ ವರ್ಷದಲ್ಲಿ ಆರು ಸಾವಿರಕ್ಕೂ ಹೆಚ್ಚು ಹೆಣ್ಣು ಮಕ್ಕಳ ಜೀವನ ಉಳಿಸಿದ ಸಂಸ್ಥೆ
bangalore , ಶನಿವಾರ, 11 ಡಿಸೆಂಬರ್ 2021 (19:58 IST)
ಹಿಂದಿನಿಂದಲೂ ನಮ್ಮಲ್ಲಿ ಬಾಲ್ಯ ವಿವಾಹದ ಪದ್ಧತಿ ಕೇಳಿದ್ದೇವೆ.. ಕೆಲವೊಮ್ಮೆ ನೋಡಿದ್ದೇವೆ ಕೂಡ. ಕೋವಿಡ್ ಕಾರಣದಿಂದ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಬಾಲ್ಯದ ಕನಸನ್ನು ಸುಟ್ಟು ಹಾಕಿ ಮದುವೆಯ ಜೀವನಕ್ಕೆ ಕಾಲಿಟ್ಟಿದ್ದಾರೆ.
‘ಹಮಾರಿ ಬಚ್ಪನ್ ಟ್ರಸ್ಟ್’- ಇಂತಹದ್ದೇ ಬಾಲ್ಯ ವಿವಾಹ, ಮಹಿಳೆಯರ ಆರ್ಥಿಕ ಸಮಸ್ಯೆಗಳ ವಿರುದ್ಧ ಹೋರಾಡಿ ಸಾವಿರಾರು ಹೆಣ್ಣುಮಕ್ಕಳ ಜೀವನ ಉಳಿಸಿದ ಸಂಸ್ಥೆಯ ಯಶೋಗಾಥೆ ಇದು.
ಮಧುಮಿತ, 10ನೇ ತರಗತಿಯ ವಿದ್ಯಾರ್ಥಿನಿ. ಮೂಲತಃ ಒಡಿಶಾದ ರೋರ್ಕೆಲಾ ಎಂಬ ಗ್ರಾಮದವಳು. ಕೋವಿಡ್ ಮಾರಿ ತಟ್ಟಿದಾಗ ಆರ್ಥಿಕವಾಗಿ ಹೊಡೆತ ಅನುಭವಿಸಿದ್ದ ಮಧುಮಿತ ಕುಟುಂಬ ಆಕೆಯ ಮದುವೆ ಮಾಡಲು ತೀರ್ಮಾನಿಸಿದರು. ಆದರೆ ಇದನ್ನು ನಿರಾಕರಿಸಲು ಸಹಾಯ ಮಾಡಿದ್ದು ಇದೇ ಸಂಸ್ಥೆ.
ನವೆಂಬರ್ 2020ರಿಂದ ಜುಲೈ 2021ರ ವೇಳೆಗೆ 3,024 ಕ್ಕೂ ಹೆಚ್ಚು ಬುಡಕಟ್ಟು ಮಹಿಳೆಯರನ್ನು ರಕ್ಷಿಸಿದೆ. ಮಹಿಳೆಯರಿಗೆ ಕೌಶಲ್ಯ ತರಬೇತಿ, ಮಾನಸೀಕ ಸಾಮರ್ಥ್ಯ ಹೆಚ್ಚಿಸುದುವುದನ್ನು ಕಲಿಸುತ್ತಿದೆ.
ಇಲ್ಲಿ ಮಹಿಳೆಯರಿಗೆ ತರಬೇತಿ, ಸೇವಿಂಗ್ಸ್, ವೃತ್ತಿಪರ ಕೌಶಲ್ಯ, ಕೃಷಿ ಸೇರಿದಂತೆ ಆರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಮುನ್ನುಗ್ಗುಯತ್ತಿದೆ.
ಜಿಲ್ಲಾಡಳಿತದ ಸಹಯೋಗದೊಂದಿಗೆ ಜನಾಭಿವೃದ್ಧಿಗೆಂದು ರೂಪುಗೊಂಡಿರುವ ಈ ಸಂಸ್ಥೆ 2020-2021ರ ನಡುವೆ 6,077 ಹೆಣ್ಣು ಮಕ್ಕಳನ್ನು ರಕ್ಷಿಸಿದೆ. ಅಷ್ಟೇ ಅಲ್ಲ ಈ ಮಕ್ಕಳಿಗೆ ಅಗತ್ಯವಿರುವ ಸಂವಹನೆ, ಋತುಚಕ್ರದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಮಕ್ಕಳಿಗೆ ನಾಯಕತ್ವದ ಕೌಶಲ್ಯ, ಸಮಯ ನಿರ್ವಗಣೆ, ಒತ್ತಡದ ಬಗ್ಗೆ ಕಲಿಸಲಾಗುತ್ತಿದೆ.
ಹೆಣ್ಣು ಮಕ್ಕಳ ಶೋಷಣೆ ನಿಲ್ಲಿಸಲು ಶ್ರಮಿಸಿ, ಅವರಿಗೆ ವಿದ್ಯಾಭ್ಯಾಸ ಒದಗಿಸುತ್ತಿರುವ ಇಂತಹ ಲಕ್ಷಾಂತರ ಸಂಸ್ಥೆಗಳು ನಮ್ಮ ಸುತ್ತಮುತ್ತ ಇರುತ್ತವೆ. ಅಂತಹ ಸಂಸ್ಥೆಯಲ್ಲಿ ಶ್ರಮಿಸುತ್ತಿರುವವರಿಗೆ ನಮ್ಮದೊಂದು ಸಲಾಮ್.

Share this Story:

Follow Webdunia kannada

ಮುಂದಿನ ಸುದ್ದಿ

ಸೇನಾ ಮುಖ್ಯಸ್ಥರಾಗಿ ಮನೋಜ್ ಮುಕುಂದ ರವಾನೆ