Select Your Language

Notifications

webdunia
webdunia
webdunia
webdunia

ವಚನ ಭ್ರಷ್ಟತೆ ಹಣೆಪಟ್ಟಿ ಹೊತ್ತ ಹೆಚ್‌ಡಿಕೆ

ವಚನ ಭ್ರಷ್ಟತೆ ಹಣೆಪಟ್ಟಿ ಹೊತ್ತ ಹೆಚ್‌ಡಿಕೆ
ಬೆಂಗಳೂರು , ಮಂಗಳವಾರ, 14 ಮಾರ್ಚ್ 2023 (15:01 IST)
2004ರ ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ರಾಜ್ಯದ ಜನತೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಲಿಲ್ಲ. ಹೀಗಾಗಿ ಸ್ವತಂತ್ರವಾಗಿ ಸರ್ಕಾರ ರಚನೆ ಸಾಧ್ಯವಾಗದೇ ಮೂರೂ ಪಕ್ಷಗಳು ಅತಂತ್ರ ಸ್ಥಿತಿಯಲ್ಲಿದ್ದವು.
 
ಬಿಜೆಪಿ 79 ಸ್ಥಾನಗಳೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ 65 ಹಾಗೂ ಜೆಡಿಎಸ್ 58 ಸ್ಥಾನಗಳನ್ನು ಗಳಿಸಿದರೆ, ಸಂಯುಕ್ತ ಜನತಾ ದಳ 5 ಸ್ಥಾನ ಗಳಿಸಿತ್ತು. ಪಕ್ಷೇತರರು 17 ಮಂದಿ ಗೆಲುವಿನ ನಗೆ ಬೀರಿದ್ದರು. ಹೀಗಿದ್ದಾಗ ಕಾಂಗ್ರೆಸ್, ಜೆಡಿಎಸ್ ಜೊತೆ ಮೈತ್ರಿ ಸಾಧಿಸಿ ಸರ್ಕಾರ ರಚಿಸಿತು. ಈ ಮೈತ್ರಿ ಕೇವಲ 20 ತಿಂಗಳು ಮಾತ್ರ ಆಡಳಿತ ನಡೆಸಿತು.

ಕಾಂಗ್ರೆಸ್ ಮೈತ್ರಿಯಿಂದ ಹೊರಬಂದ ಜೆಡಿಎಸ್ ಕುಮಾರಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಸಖ್ಯ ಬೆಳೆಸಿತು. 20-20 ಸೂತ್ರದನ್ವಯ ರಚನೆಯಾದ ಸರ್ಕಾರದ ಮೊದಲ ಅವಧಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ, ಬಿ.ಎಸ್.ಯಡಿಯೂರಪ್ಪ ಉಪಮುಖ್ಯಮಂತ್ರಿಯಾದರು.

ಅಕ್ಟೋಬರ್ 2, 2007ಕ್ಕೆ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಬೇಕಾಗಿದ್ದ ಕುಮಾರಸ್ವಾಮಿ ಹಿಂದೇಟಾಕಿದ ಪರಿಣಾಮ ಬಿಜೆಪಿ ಬೆಂಬಲ ವಾಪಸ್ ಪಡೆಯಿತು. ಸರ್ಕಾರ ಪತನವಾದ ಕೆಲ ದಿನಗಳ ಬಳಿಕ ಮತ್ತೆ ದೋಸ್ತಿ ಕುದುರಿದ ಪರಿಣಾಮ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಜೆಡಿಎಸ್ನಿಂದಾದ ವಚನಭ್ರಷ್ಟತೆಯನ್ನ ಮುಂದಿಟ್ಟುಕೊಂಡು ಚುನಾವಣೆಗೆ ದುಮುಕಿದ ಯಡಿಯೂರಪ್ಪ ಪಕ್ಷವನ್ನ ರಾಜ್ಯಾದ್ಯಂತ ಪುನರ್ ಸಂಘಟಿಸುವಲ್ಲಿ ಯಶಸ್ವಿಯಾದರು. ಕುಮಾರಸ್ವಾಮಿ ಅವರಿಗೆ ‘ವಚನಭ್ರಷ್ಟ’ ಹಣೆಪಟ್ಟಿ ಅಂಟಿಕೊಂಡಿತು. ಇದು ಯಡಿಯೂರಪ್ಪ ಅವರಿಗೆ ಚುನಾವಣೆಯ ವಿಷಯವಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ಬಾಕಿ ಹಣ ಬಿಡುಗಡೆ ಮಾಡಲಿಲ್ಲ ಅಂದರೆ ಮುಖ್ಯ ಮಂತ್ರಿ ಮನೆಗೆ ಮುತ್ತಿಗೆ ಹಾಕ್ತೇವೆ- ಕೆಂಪಣ್ಣ