Select Your Language

Notifications

webdunia
webdunia
webdunia
webdunia

₹1.5 ಕೋಟಿ ಮೌಲ್ಯದ ಚಿನ್ನ ಠಾಣೆಗೆ ಒಪ್ಪಿಸಿ ಪ್ರಾಮಾಣಿಕ ಮೆರೆದ ಪತ್ನಿ!

police station
bangalore , ಮಂಗಳವಾರ, 5 ಸೆಪ್ಟಂಬರ್ 2023 (18:00 IST)
ಇತ್ತೀಚೆಗೆ ತಾನು ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿ ಉಪಾಧ್ಯಕ್ಷೆ ಗಿರಿಜಾ ಅವರ ಮನೆಯಲ್ಲಿ ಚಿನ್ನಾಭರಣ ಕಳವು ಆರೋಪ ಹೊತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಕಾರು ಚಾಲಕನ ಪತ್ನಿ, ಈಗ ಸ್ವಯಂ ಪೊಲೀಸ್‌ ಠಾಣೆಗೆ ತೆರಳಿ ತಮ್ಮ ಮನೆಯಲ್ಲಿ ಮೃತ ಪತಿ ಬಚ್ಚಿಟ್ಟಿದ್ದ .1.5 ಕೋಟಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರಿಗೊಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.ಕೆಲ ದಿನಗಳ ಹಿಂದೆ ಖಾಸಗಿ ಕಂಪನಿ ಉದ್ಯೋಗಿ ಗಿರಿಜಾ ಅವರ ಕಾರು ಚಾಲಕ ಜಿಮೋನ್‌ ವರ್ಗೀಸ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ಮೃತನ ಕಳ್ಳತನ ಕೃತ್ಯವು ಬೆಳಕಿಗೆ ಬಂದಿತು. ಅಷ್ಟರಲ್ಲಿ ಪುಲಕೇಶಿನಗರ ಠಾಣೆ ತೆರಳಿ ಬಳೆ, ಸರಗಳು ಹಾಗೂ ಉಂಗುರ ಸೇರಿದಂತೆ .1.5 ಕೋಟಿ ಮೌಲ್ಯದ 38 ವಿವಿಧ ಬಗೆಯ ಆಭರಣಗಳನ್ನು ಪೊಲೀಸರಿಗೆ ಮೃತನ ಪತ್ನಿ ಜುಬೀನಾ ವರ್ಗೀಸಿ ಒಪ್ಪಿಸಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್‌ ಗುಳೇದ್‌ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಡಿದ್ದು ರಾಮನಗರದಲ್ಲಿ ಪಾದಯಾತ್ರೆ ಮಾಡುತ್ತಿದ್ದೆವೆ-ಡಿಸಿಎಂ ಡಿಕೆ ಶಿವಕುಮಾರ್