ಹಾವೇರಿ: ಪತಿ ಅಂತ್ಯಕ್ರಿಯೆ ವೇಳೆ ಲೋ ಬಿಪಿಯಿಂದ ಪತ್ನಿಯೂ ಸಾವನ್ನಪ್ಪಿದ ಘಟನೆ ರಾಣೆಬೆನ್ನೂರಿನ ನಂದಿಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ.ಈ ಮೂಲಕ ಸಾವಿನಲ್ಲೂ ದಂಪತಿಗಳು ಒಂದಾಗಿದ್ದಾರೆ.
ಅನಾರೋಗ್ಯದಿಂದ ವೀರಬಸಪ್ಪ ಗೋಣಗೇರ (70) ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದರು. ಅಂತ್ಯಕ್ರಿಯೆಗೆ ಹೋದ ಪತ್ನಿ ಬಸಮ್ಮ ವೀರಬಸಪ್ಪ ಗೋಣಗೇರ (60) ಅವರಿಗೆ ಲೋ ಬಿಪಿಯಾಗಿ ಮೃತಪಟ್ಟಿದ್ದಾರೆ.
ವಿಚಾರ ತಿಳಿದ ಬಳಿಕ ಪತಿ ಪತ್ನಿಯರ ಅಂತ್ಯಕ್ರಿಯೆಯನ್ನು ಒಂದೇ ಚಿತೆಯಲ್ಲಿ ನಡೆಸಿದ್ದಾರೆ.
ಸಾವಿನಲ್ಲೂ ಒಂದಾದ ಆದರ್ಶ ದಂಪತಿಯ ಅಂತ್ಯಸಂಸ್ಕಾರವನ್ನು ಗ್ರಾಮಸ್ಥರು ನೆರೆವೇರಿಸಿದ್ದಾರೆ.