Publish Date: Sat, 31 Mar 2018 (08:41 IST)
Updated Date: Sat, 31 Mar 2018 (08:44 IST)
ಮೈಸೂರು: ಮೊನ್ನೆಯಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಯಡಿಯೂರಪ್ಪ ಸರ್ಕಾರ ನಂ.1 ಭ್ರಷ್ಟ ಸರ್ಕಾರ ಎಂದು ನಗೆಪಾಟಲಿಗೀಡಾಗಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವರು ಟ್ವೀಟ್ ಮಾಡಿ ಕೊನೆಗೂ ಅಮಿತ್ ಶಾ ಸತ್ಯ ಹೇಳಿದ್ದಾರೆಂದು ಲೇವಡಿ ಮಾಡಿದ್ದರು.
ಆ ಘಟನೆಗೆ ಇದೀಗ ಶಾ ಪ್ರತಿಕ್ರಿಯಿಸಿದ್ದಾರೆ. ‘ನನ್ನ ಬಾಯ್ತಪ್ಪಿನಿಂದ ಅಂತಹ ಹೇಳಿಕೆ ಬಂತು. ಸಿದ್ಧರಾಮಯ್ಯ ಎನ್ನುವ ಬದಲು ಯಡಿಯೂರಪ್ಪ ಎಂದು ಬಿಟ್ಟೆ. ಆದರೆ ರಾಹುಲ್ ಗಾಂಧಿಯವರೇ, ನಾನು ತಪ್ಪು ಮಾಡಿದರೂ ಕರ್ನಾಟಕ ಜನ ತಪ್ಪು ಮಾಡಲ್ಲ’ ಎಂದು ಶಾ ಹೇಳಿಕೆ ನೀಡಿದ್ದಾರೆ.
ಮೈಸೂರು ಪ್ರವಾಸದಲ್ಲಿರುವ ಶಾ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರದ ಬಗ್ಗೆ ತಪ್ಪು ಭಾಷಾಂತರದಿಂದ ಮುಜುಗರಕ್ಕೀಡಾಗಿದ್ದಾರೆ. ಸಂಸದ ಪ್ರಹ್ಲಾದ್ ಜೋಶಿ ದಲಿತರು ಮತ್ತು ಬಡವರಿಗೆ ಮೋದಿ ಸರ್ಕಾರ ಏನೂ ಮಾಡಲ್ಲ ಎಂದು ತಪ್ಪಾಗಿ ಭಾಷಾಂತರಿಸಿರುವುದು ಶಾ ಮುಜುಗರಕ್ಕೀಡು ಮಾಡುವಂತೆ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ