Publish Date: Sun, 19 Jan 2020 (10:04 IST)
Updated Date: Sun, 19 Jan 2020 (10:05 IST)
ಹುಬ್ಬಳ್ಳಿ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನೆಗೆ ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭೇಟಿ ನೀಡಿದ್ದಾರೆ.
ಇಂದು ಬೆಳಿಗ್ಗೆ ಹುಬ್ಬಳ್ಳಿಯಲ್ಲಿರುವ ಮಯೂರ ಎಸ್ಟೇಟ್ ನಲ್ಲಿರುವ ಜೋಶಿ ನಿವಾಸಕ್ಕೆ ಭೇಟಿ ನೀಡಿದ ಅಮಿತ್ ಶಾ ಅವರಿಗೆ ಜೋಶಿ ಕುಟುಂಬಸ್ಥರು ಅದ್ದೂರಿ ಸ್ವಾಗತ ಕೋರಿದ್ದಾರೆ. ಹಾಗೇ ಅವರು ಅಲ್ಲಿಯೇ ಉಪಹಾರ ಸೇವಿಸಿದ್ದಾರೆ.
ಅಲ್ಲದೇ ಜೋಶಿ ಅವರ ನಿವಾಸದೆದುರು ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಿ ಮೂವರು ಮಕ್ಕಳಿಗೆ ಪೋಲಿಯೋ ಹನಿ ಹಾಕಿದ್ದಾರೆ.