Webdunia - Bharat's app for daily news and videos

Install App

ಅಂಬೋಲಿ ಫಾಲ್ಸ್: ಪ್ರವಾಸಿಗರ ಸ್ವರ್ಗ

Webdunia
ಮಂಗಳವಾರ, 10 ಜುಲೈ 2018 (17:43 IST)
ಮಳೆಗಾಲ ಆರಂಭವಾದ್ರೆ ಸಾಕು ಜಲಪಾತಗಳತ್ತ ಪ್ರವಾಸಿಗರು ಮುಖ ಮಾಡತ್ತಾರೆ...ಅದರಲ್ಲೂ ಮೂರು ರಾಜ್ಯಗಳ ಗಡಿಯಲ್ಲಿ ಇರುವ ಆ ಚಲುವೆಯನ್ನ ಕಣ್ಣತ್ತುಂಬಿ ನೋಡಲು ಜನಸಾಗರವೇ ಹರಿದು ಬರುತ್ತದೆ. ಅವಳ ಸೌಂದರ್ಯದ ಸೊಬಗಿನಲ್ಲಿ ಪ್ರತಿಯೊಬ್ಬರು ಮೈಮರೆತು ಹೋಗುತ್ತಾರೆ. ಅದುವೇ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಅಂಬೋಲಿ ಜಲಪಾತ.


ಮುಂಗಾರು ಮಳೆ ಆರಂಭವಾದ್ರೆ ಸಾಕು ಪ್ರತಿಯೊಬ್ಬರು ಪ್ರಸಿದ್ಧ ಪ್ರವಾಸಿ ತಾಣಗಳತ್ತ ಹೆಜ್ಜೆ ಹಾಕ್ತಾರೆ. ಯಾಕೇಂದ್ರೆ ಮಳೆಗಾಲದಲ್ಲಿ ಪ್ರಕೃತಿ ಸೊಬಗು, ಜಲಪಾತಗಳ ವೈರಾವನ್ನ ಕಣ್ಣಾರೆ ನೋಡಿ ಆನಂದಿಸಬೇಕೆಂಬ ಹಂಬಲ ಪ್ರವಸಾಗಿರದ್ದು. ಹೀಗೆ ಕರ್ನಾಟಕ, ಗೋವಾ, ಕೇರಳ , ಮಹಾರಾಷ್ಟ್ರದ ಸೇರಿದ ದೇಶದಲ್ಲಿ ಹಲವಾರು ಜಲಪಾತಗಳಿವೆ. ಜೋಗ ಜಲಪಾತ, ಗೋಕಾಕ ಪಾಲ್ಸ್ ಹೀಗೆ ಹತ್ತಾರು ಜಲಪಾತಗಳನ್ನ ನಾವು ದೂರದಿಂದ ನೋಡಿ ಆನಂದಿಸಬೇಕು. ಆದ್ರೆ  ಈ ಎಲ್ಲ ಜಲಪಾತಗಳಿಂಗಿಂತಲೂ  ಅಂಬೋಲಿ ಜಲಪಾತ ತುಂಬಾ ವಿಶೇಷವಾಗಿದೆ. ಅಂಬೋಲಿಯ ವೈಯಾರವನ್ನ, ಅವಳ ಸೌಂದರ್ಯವನ್ನು.... ಬೆಟ್ಟದಿಂದ ಕೆಳಕ್ಕೆ ಧುಮ್ಮುಕ್ಕು ನರ್ತನವನ್ನ ನಾವು ಸ್ವಂಯ ಸ್ಪರ್ಶಿಸಿ ಆನಂದಿಸಬಹುದಾಗಿದೆ.

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ಈ ಅಂಬೋಲಿ ಜಲಪಾತ ಬರುತ್ತದೆ. ಅಂಬೋಲಿ ಜಲಪಾತವೂ ಮಹಾರಾಷ್ಟ್ರ ರಾಜ್ಯದ ಸಿಂದುರ್ಗ ಜಿಲ್ಲೆಯ ಸಾವಂತವಾಡಿ ತಾಲೂಕಿನ ಅಂಬೋಲಿ ಗ್ರಾಮದಲ್ಲಿದೆ. ಪಶ್ಚಿಮ ಘಟ್ಟದ ಸಾಲಿನಲ್ಲಿ ಈ ಮೋಹಕ ಚಲುವೆ ಇದ್ದಾಳೆ. ಪಶ್ಚಿಮ ಘಟ್ಟದ ಬೆಟ್ಟಗಳ ಸಾಲಿನ ನೂರಾರು ಚಿಕ್ಕು-ಪುಟ್ಟ ಜಲಪಾತಗಳು ನಮಗೆ ನೋಡಲು ಸಿಗುತ್ತವೆ.. ಆದ್ರೆ ಈ ಅಂಬೋಲಿ ಜಲಪಾತ ವಿಶೇಷವೆಂದ್ರೆ ಅದು ರಸ್ತೆಗೆ ಹತ್ತಿಕೊಂಡಿದೆ. ಸುಮಾರು 40 ಅಡಿ ಎತ್ತರ ಬೆಟ್ಟದಿಂದ ಜಲದಾರೆ ಭೂಮಿಯನ್ನ ಸ್ಪರ್ಶಿಸುವ ದೃಶ್ಯವೇ ಇಲ್ಲಿ ಮನಮೋಹಕ. ಎತ್ತರದ ಬೆಟ್ಟದಿಂದ ಶುದ್ಧ ಹಾಲು ಬೀಳುತಿರುವಂತೆ ಭಾಸವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಹುಲ್, ಸೋನಿಯಾ ಜತೆಗಿನ ಭೇಟಿ ಕುಟುಂಬದ ಜತೆ ಸಮಯ ಕಳೆದ ಹಾಗೇ: ಎಂಕೆ ಸ್ಟಾಲಿನ್‌

ಬಿಟ್ರೇ ಮೈಸೂರು ಸ್ಯಾಂಡಲ್ ಸೋಪ್‌ಗೆ ನಾನೇ ಫ್ರೀಯಾಗಿ ರಾಯಭಾರಿಯಾಗ್ತೀನಿ: ವಾಟಾಳ್ ನಾಗರಾಜ್‌

ಕರಾಳ ನೆನಪು ಮಾಸುವ ಮುನ್ನವೇ ಮತ್ತೆ ಕೋವಿಡ್ ಭೀತಿ: ಸಿಲಿಕಾನ್ ಸಿಟಿಯಲ್ಲಿ ಮಗುವಿಗೆ ಸೋಂಕು ದೃಢ

Gang Rape: ಸಾಂಗ್ಲಿಯಲ್ಲಿ MBBS ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್‌

ರಾಮನಗರಕ್ಕೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಅಧಿಕಾರ ಸರ್ಕಾರಕ್ಕಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments