Select Your Language

Notifications

webdunia
webdunia
webdunia
Sunday, 6 April 2025
webdunia

ಶಿಕ್ಷಕರ ನೇಮಕಾತಿ ಅಕ್ರಮ ಆರೋಪ

ಸಿದ್ದರಾಮಯ್ಯ
ವಿಜಯಪುರ , ಬುಧವಾರ, 7 ಸೆಪ್ಟಂಬರ್ 2022 (08:56 IST)
ತುಮಕೂರು/ವಿಜಯಪುರ : ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಕಾಲದಲ್ಲಿ ಶಿಕ್ಷಕರ ನೇಮಕಾತಿ ಅಕ್ರಮ ಆಗಿರುವ ಆರೋಪದಲ್ಲಿ ಇದೀಗ ಸಿಐಡಿ ಅಧಿಕಾರಿಗಳು 11 ಜನರನ್ನು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆಯ 10 ಜನ ಹಾಗೂ ವಿಜಯಪುರದ ಒಬ್ಬ ಶಿಕ್ಷಕನನ್ನು ಬಂಧಿಸಲಾಗಿದ್ದು, ಅವರನ್ನು ಬುಧವಾರ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಆರೋಪಿಗಳಲ್ಲಿ ತುಮಕೂರಿನ 10 ಜನ ಹಾಗೂ ವಿಜಯಪುರದ ಓರ್ವ ಶಿಕ್ಷಕ ಸಿಐಡಿ ಅಧಿಕಾರಿಗಳ ಕೈಯಲ್ಲಿ ಸೆರೆಯಾಗಿದ್ದಾರೆ.

ಶಮೀನಾಜ್, ರಾಜೇಶ್ವರಿ ಜಗ್ಲಿ, ಕಮಲಾ, ನಾಗರತ್ನ, ದಿನೇಶ್, ನವೀನ್ ಹನುಮಗೌಡ, ನವೀನ್ ಕುಮಾರ್, ದೇವೇಂದ್ರ ನಾಯ್ಕ್, ಹರೀಶ್ ಆರ್, ಪ್ರಸನ್ನ ಬಿ.ಎಂ ಹಾಗೂ ಮಹೇಶ ಶ್ರೀಮಂತ ಸೂಸಲಾಡಿ ಬಂಧಿತ ಆರೋಪಿಗಳು.


Share this Story:

Follow Webdunia kannada

ಮುಂದಿನ ಸುದ್ದಿ

ಉಚಿತ ವಿದ್ಯುತ್ ಅನುಷ್ಠಾನಕ್ಕೆ ಹೊಸ ಆ್ಯಪ್