Select Your Language

Notifications

webdunia
webdunia
webdunia
webdunia

ಕೃಷಿ ಸಚಿವರ ಆಪ್ತ ಕಾರ್ಯದರ್ಶಿಯಿಂದ ಹಿಂಸೆ ಆರೋಪ: ವಿಡಿಯೊ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಅಧಿಕಾರಿ

Chief Minister Siddaramaiah

Sampriya

ಬೆಂಗಳೂರು , ಮಂಗಳವಾರ, 10 ಸೆಪ್ಟಂಬರ್ 2024 (19:32 IST)
ಕಲಬುರಗಿ: ಹಿರಿಯ ಅಧಿಕಾರಿಗಳ ಕಿರುಕುಳ ಮತ್ತು ಲಂಚಾವತಾರಕ್ಕೆ ಬೇಸತ್ತು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ವಿಡಿಯೊ ಮಾಡಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜೇವರ್ಗಿಯಲ್ಲಿ ನಡೆದಿದೆ.

ಜೇವರ್ಗಿಯಲ್ಲಿ ಕೃಷಿ ಇಲಾಖೆಯ ಅಧೀಕ್ಷಕರಾಗಿರುವ ಧರ್ಮರಾಯ ಬೈನೂರ ಆತ್ಮಹತ್ಯೆಗೆ ಯತ್ನಸಿದ್ದಾರೆ.

ಕೃಷಿ ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್‌ ಅವರಿಂದ ಮಾನಸಿಕ ಹಿಂಸೆಯಿಂದ ಬೇಸತ್ತು ತಾನು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಮೂರು ಪುಟಗಳ ಡೆತ್‌ನೋಟ್‌ ಮತ್ತು ಎರಡು ವಿಡಿಯೊ ಮಾಡಿದ್ದಾರೆ.

ಧರ್ಮರಾಯ ಅವರು ನಿದ್ರೆಮಾತ್ರೆ ಸೇವಿಸಿ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಡೆತ್‌ನೋಟ್‌ ಅನ್ನು ರಾಜ್ಯಪಾಲರಿಗೆ ಬರೆದಿದ್ದಾರೆ.

ಪ್ರಭಾಕರ್‌ ಅವರ ಪ್ರಚೋದನೆ ಮತ್ತು ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಿರುಕುಳದಿಂದಾಗಿ ಆತ್ಮಹತ್ಯೆಗೆ ಮುಂದಾಗಿರುವುದಾಗಿ ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಂಗೇರಿದ ಹರಿಯಾಣ ಚುನಾವಣಾ ಅಖಾಢ: ಕುಸ್ತಿಪಟು ವಿನೇಶ್‌ ವಿರುದ್ಧ ಕ್ಯಾಪ್ಟನ್‌ ಕಣಕ್ಕೆ