Select Your Language

Notifications

webdunia
webdunia
webdunia
webdunia

ಬಿಜೆಪಿಯವರು ಸುಮ್ಮನಿದ್ರೆ ಎಲ್ಲಾ ಗಲಾಟೆಗಳು ನಿಲ್ಲುತ್ತವೆ: ಸಿಎಂ ತಿರುಗೇಟು

ಬಿಜೆಪಿಯವರು ಸುಮ್ಮನಿದ್ರೆ ಎಲ್ಲಾ ಗಲಾಟೆಗಳು ನಿಲ್ಲುತ್ತವೆ: ಸಿಎಂ ತಿರುಗೇಟು
ಬೆಂಗಳೂರು , ಮಂಗಳವಾರ, 11 ಜುಲೈ 2017 (13:40 IST)
ಮಂಗಳೂರಿನಲ್ಲಿ ಗಲಾಟೆ ಮಾಡುವವರು ಬೇರೆ ಕಡೆಯಿಂದ ಬಂದವರಲ್ಲ. ಗಲಾಟೆ ಮಾಡುವವರು ನಮ್ಮಲ್ಲಿಯೇ ಇದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
 
ಬಿಜೆಪಿಯವರು ಸುಮ್ಮನಿದ್ರೆ ಎಲ್ಲಾ ಗಲಾಟೆಗಳು ನಿಲ್ಲುತ್ತವೆ. ಬಿಜೆಪಿ ನಾಯಕರು ತಾವು ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಚಿವರ ರಾಜೀನಾಮೆ ಬೇಡುವ ನಾಟಕವಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
 
ಮಂಗಳೂರು, ದಕ್ಷಿಣ ಕನ್ನಡದಲ್ಲಿ ನಡೆದ ಗಲಭೆಗಳಲ್ಲಿ ಮತೀಯ ಶಕ್ತಿಗಳ ಕೈವಾಡವಿರುವುದು ಕಂಡು ಬಂದಿದೆ. ಅಪರಾಧ ಕೃತ್ಯಗಳಲ್ಲಿ ಯಾವುದೇ ಸಮುದಾಯದವರಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಖಚಿತ ಎಂದರು.
 
ಬಿಜೆಪಿಯವರಿಗೆ ಸಮುದಾಯಗಳನ್ನು ಒಡೆದು ಕೋಮುಗಲಭೆಗಳನ್ನು ಸೃಷ್ಟಿಸುವುದೇ ಕಾಯಕವಾಗಿದೆ ಎಂದು ಅನಿಸುತ್ತದೆ. ಆದರೆ, ಇಂತಹ ಪ್ರಯತ್ನಗಳು ವಿಫಲವಾಗಲಿವೆ. ಪ್ರತಿಯೊಂದು ಸಮುದಾಯದಲ್ಲಿ ಶಾಂತಿ ನೆಲೆಸುವಂತೆ ಮಾಡಿ ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅಮರ್‌ನಾಥ್ ಯಾತ್ರಿಕರ ದಾಳಿಯ ವೇಳೆ ರಕ್ಷಕನಾಗಿ ಬಂದ ಪುಣ್ಯಾತ್ಮ ಯಾರು ಗೊತ್ತಾ?