ರಾತ್ರಿ 8 ರಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೆ 57 ಗಂಟೆಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ.
ತುರ್ತು ಸೇವೆ ಉಳಿದಂತೆ ಎಲ್ಲಾ ಸೇವೆಗಳನ್ನು ಬಂದ್ ಮಾಡಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡುವ ರಾಜ್ಯ ಸರ್ಕಾರ, ಹೋಟೆಲ್‌ಗಳು ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಯಾವುದೇ ರೀತಿಯ ಸೇವೆಗಳು ವೀಕೆಂಡ್ ಕರ್ಫ್ಯೂನಲ್ಲಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿನಾಯಿತಿ ಪಡೆದಿರುವ 10, 11, 12 ತರಗತಿಗಳು ಕೂಡ ಬಂದ್ ಆಗಲಿವೆ. ಕೇವಲ ಫುಡ್ ಡೆಲಿವರಿ ಬಾಯ್ಸ್, ಕೈಗಾರಿಕೆ, ಟಿಲಿಕಾಂ ಸೇರಿದಂತೆ ವಿನಾಯಿತಿ ಪಡೆದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ.
ಏನೇನು ಇರುತ್ತೆ ?
ಹಾಲಿನ ಬೂತ್ಗಳು
ತರಕಾರಿ ಮತ್ತು ಹಣ್ಣಿನ ಮಂಡಿಗಳು
ದಿನಸಿ ಅಂಗಡಿಗಳು, ಮಾಂಸದ ಅಂಗಡಿಗಳು, ಮೀನು ಮಾರುಕಟ್ಟೆಗಳು ತೆರೆದಿರುತ್ತವೆ.
ಬೀದಿ ಬದಿ ವ್ಯಾಪಾರಿಗಳ ಕಾರ್ಯಚಟುವಟಿಕೆ ಎಂದಿನಂತಿರಲಿದೆ.
ಆಸ್ಪತ್ರೆಗಳು, ನರ್ಸಿಂಗ್ ಹೋಮ್, ಮೆಡಿಕಲ್ ಶಾಪ್, ನ್ಯಾಯಲೆ ಅಂಗಡಿಗಳು ಕಾರ್ಯಚಟುವಟಿಕೆ ನಡೆಸಲಿವೆ.
ಎಲ್ಲಾ ಪದಾರ್ಥಗಳನ್ನು ಹೋಮ್ ಡೆಲಿವರಿ ಮಾಡಲು.
ಪೆಟ್ರೋಲ್ ಬಂಕ್ಗಳು, ಕೃಷಿ ಮಾರುಕಟ್ಟೆಗಳು ತೆರೆಯಲಿವೆ.
ಹೋಟೆಲ್ ತೆರೆಯಲಿದೆ, ಕೇವಲ ಪಾರ್ಸೆಲ್‌ಗೆ ಮಾತ್ರ ಅವಕಾಶ.
ಐಟಿ ಬಿಟಿ ಕಂಪನಿಗಳು, ಕೈಗಾರಿಕೆಗಳ ಕಾರ್ಯಚಟುವಟಿಕೆ ಯಥಾಸ್ಥಿತಿಯಲ್ಲಿರಲಿದೆ.