Publish Date: Sun, 24 May 2020 (19:06 IST)
Updated Date: Sun, 24 May 2020 (19:08 IST)
ಲಾಕ್ ಡೌನ್ ವೇಳೆಯಲ್ಲಿ ರೈಲು ನಿಲ್ದಾಣದಲ್ಲಿ ಸಂಶಯಾಸ್ಪದವಾಗಿ ನಿಲ್ಲಿಸಿದ್ದ ಸ್ಕಾರ್ಪಿಯೋ ಮೇಲೆ ದಾಳಿ ನಡೆಸಿದ ಅಬಕಾರಿ ಸಿಬ್ಬಂದಿ ಲಕ್ಷಾಂತರ ಮೌಲ್ಯದ ಮದ್ಯ ಹಾಗೂ ಪಿಸ್ತೂಲ್ ವಶಕ್ಕೆ ಪಡೆದುಕೊಂಡಿದ್ದಾರೆ.
ಕಲಬುರಗಿ ನಗರದ ರೈಲು ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಆಳಂದ ತಾಲೂಕಿನ ಹಿರೋಳ್ಳಿಯ ದಯಾನಂದ ಸಾಹು ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
17.280 ಲೀ. ಮದ್ಯ, 70.200 ಲೀ. ಬೀಯರ್ ಹಾಗೂ ಪಿಸ್ತೂಲ್ ಜೊತೆಗೆ 10 ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.