ಮುಂಬೈ : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎನ್ ಸಿಪಿಯ ಹಿರಿಯ ಮುಖಂಡ ಅಜಿತ್ ಪವಾರ್ ಇದೀಗ ತಾವು ರಾಜೀನಾಮೆ ನೀಡಲು ಕಾರಣವೆನೆಂಬುದನ್ನು ಬಿಹಿರಂಗಪಡಿಸಿದ್ದಾರೆ.
ಶುಕ್ರವಾರ ಸಂಜೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎನ್ಸಿಪಿಯ ಹಿರಿಯ ಮುಖಂಡ ಅಜಿತ್ ಪವಾರ್, ರಾಜೀನಾಮೆಗೆ ಕಾರಣವನ್ನು ತಿಳಿಸಿರಲಿಲ್ಲ. ಇದೀಗ ರಾಜೀನಾಮೆ ನೀಡಿದ ಬಳಿಕ ತಮ್ಮ ಮಾವ ಶರದ್ ಪವಾರ್ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಉಪಮುಖ್ಯಮಂತ್ರಿಯಾಗಲು ಅದಕ್ಕೆ ಶರದ್ ಪವಾರ್ ಅವರೇ ಕಾರಣ. ಇದೀಗ ಶರದ್ ಸಾಹೇಬರ ಒಬ್ಬರ ಹೆಸರೇ ಪ್ರಕರಣ ಸಂಬಂಧ ಓಡಾಡುತ್ತಿದೆ. ಈ ವಯಸ್ಸಿನಲ್ಲಿ ಅವರು ನನ್ನ ಕಾರಣದಿಂದ ಅಪಖ್ಯಾತಿ ಎದುರಿಸಬೇಕಾಗಿದೆ ಎಂದು ನಾನು ಭಾವಿಸಿದ್ದರಿಂದ ಗೊಂದಲಕ್ಕೊಳಗಾಗಿದ್ದೆ. ಆದ್ದರಿಂದ, ಆತ್ಮಸಾಕ್ಷಿಗೆ ಅನುಗುಣವಾಗಿ ರಾಜೀನಾಮೆ ನೀಡಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಸೇರಿದಂತೆ ಅಜಿತ್ ಪವಾರ್ ಅವರ ಹೆಸರನ್ನು ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಹಗರಣ ಪ್ರಕರಣದಲ್ಲಿ ಸೇರಿಸಲಾಗಿದೆ. ಈ ಬಗ್ಗೆ ಮಹಾರಾಷ್ಟ್ರದ ಲ್ಲಿ ಅವರ ಬೆಂಬಲಿಗರು ಭಾರೀ ಪ್ರತಿಭಟನೆಗೆ ಮುಂದಾಗಿದ್ದಾರೆ.