Select Your Language

Notifications

webdunia
webdunia
webdunia
Wednesday, 9 April 2025
webdunia

ಅರಬ್ಬಿ ಸಮುದ್ರದ ಲಕ್ಷದ್ವೀಪ ಹಾಗೂ ಬಂಗಾಳಕೊಲ್ಲಿಯ ಆಗ್ನೇಯದಲ್ಲಿ ವಾಯುಭಾರ ಕುಸಿತ

ಅರಬ್ಬಿ ಸಮುದ್ರದ ಲಕ್ಷದ್ವೀಪ ಭಾಗದಲ್ಲಿ ಹಾಗೂ ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ
bangalore , ಶನಿವಾರ, 16 ಅಕ್ಟೋಬರ್ 2021 (22:06 IST)
ಅರಬ್ಬಿ ಸಮುದ್ರದ ಲಕ್ಷದ್ವೀಪ ಕೆಳಗೆ ಮತ್ತು ಬಂಗಾಳಕೊಲ್ಲಿಯ ಆಗ್ನೇಯ ವಾಯುಭಾರ ಕುಸಿತವಾಗಿದೆ, ಕರ್ನಾಟಕದಲ್ಲಿ ಎ. 17 ರವರೆಗೂ ಮಳೆ ಮುಂದುವರಿಯಲಿದೆ. ಭಾನುವಾರ 16 ಜಿಲ್ಲೆಗಳಿಗೆ ಯಲ್ಲೋ ಅಲಟ್ ೯ ನೀರು.
ರಾಜ್ಯದ ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾವೇರಿ, ಧಾರವಾಡ, ಬೆಳಗಾವಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಗದಗ ಸೇರಿ ಒಟ್ಟು 16 ಜಿಲ್ಲೆಗಳಿಗೆ ಭಾನುವಾರ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ನಂದಿ ಬೆಟ್ಟದಲ್ಲಿ ಉಗಮವಾಗುವ ಪಾಪಾಗ್ನಿ ನದಿ ಶಿಡ್ಲಘಟ್ಟ, ಬಾಗೇಪಲ್ಲಿ, ಚೇಳೂರು ಮಾರ್ಗವಾಗಿ ಹರಿದು ಆಂಧ್ರಪ್ರದೇಶದ ಕಂದಕೂರು ಮೂಲಕ ದಕ್ಷಿಣಾಭಿಮುಖವಾಗಿ ಹರಿದು ಯಾಸರಾಯನ ಜಲಶಾಯಕ್ಕೆ ಸೇರಿಕೊಳ್ಳುತ್ತದೆ. ನದಿಯ ಹರಿವಿನಿಂದ ಕೆಲವು ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದೆ. ಜೋಳ, ಭತ್ತ, ರಾಗಿ, ಅವರೆ ಬೆಳೆಗಳು ಕೊಚ್ಚಿ ಹೋಗಿದ್ದು, ರೈತರಿಗೆ ದಿಕ್ಕು ತೋಚದಂತಾಗಿದೆ. ಶಿಡ್ಲಘಟ್ಟ ತಾಲೂಕು ದಿಂಬಾರ್ಲಹಳ್ಳಿ ಸೇತುವೆ ಹೊಡೆದು ಬೆಳೆಗೆ ಮಳೆ ನೀರು ನುಗ್ಗಿದೆ.
ಇನ್ನು ವರುಣನ ಆರ್ಭಟಕ್ಕೆ ಬೆಂಗಳೂರು ನಗರದ ಹೆಚ್.ಎಸ್.ಆರ್ ಲೇಟಿಂಗ್ ಚರಂಡಿಗಳು ತುಂಬಿ ಮನೆಗಳಿಗೆ ನೀರು ನುಗ್ಗಿದೆ ಎಂದು ವರದಿಯಾಗಿದೆ.
ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲ್ಲೂಕಿನ ಕೆಂಗಾಪುರ ಗ್ರಾಮ ಸೇತುವೆ ಬಳಿ ಇರುವ ಸೂಳೆಕೆರೆ ಹಳ್ಳ ಮಳೆಯಿಂದ ತುಂಬಿ ಹರಿಯುತ್ತಿರುವ ನೀರು, ಮಕ್ಕಳ ಮಕ್ಕಳ ವಾಹನ ಸವಾರರು ರಸ್ತೆ ದಾಟಲು ಪರದಾಡುತ್ತಿದ್ದಾರೆ. ಕೋಲಾರ ಜಿಲ್ಲೆಯ ವಾಡಿಕೆಗಿಂತ ಹೆಚ್ಚಿನ ಮಳೆ ಆಗುತ್ತಿದೆ. ಬಳಕೆಯ ಕೆರೆಗಳು ಭರ್ತಿಯಾಗಿ ಕೋಡಿ ತುಂಬಿ ಹರಿಯುತ್ತಿರುವ ನೀರು. 20 ವರ್ಷಗಳಿಂದ ಖಾಲಿಯಿದ್ದ ಕೆರೆಗಳು ಭರ್ತಿ ಆಗಿದ್ದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ.
ಸಾವಿರಾರು ಏಕರೆಯ ವಿಸ್ತೀರ್ಣದ ಮುದುವಾಡಿ ಕೆರೆಯೂ ಸಹ 20 ವರ್ಷಗಳ ನಂತರ ಭರ್ತಿಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವ ಸೊಗಡು ಶಿವಣ್ಣ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್​​ ಮೇಲೆ ಮಾಡಿರುವ ಆಧಾರರಹಿತ ಆರೋಪ