Select Your Language

Notifications

webdunia
webdunia
webdunia
webdunia

ಕಾವೇರಿ ವಿಚಾರವನ್ನು ಮತ್ತೆ ಕೆದಕಿದ ತಮಿಳುನಾಡು

ಕಾವೇರಿ ವಿಚಾರವನ್ನು ಮತ್ತೆ ಕೆದಕಿದ ತಮಿಳುನಾಡು
NewDelhi , ಗುರುವಾರ, 25 ಮೇ 2017 (09:10 IST)
ನವದೆಹಲಿ: ಅತ್ತ ಕೇಂದ್ರ ಸರ್ಕಾರ ರಾಷ್ಟ್ರಪತಿ ಚುನಾವಣೆಗಾಗಿ ಸರ್ವ ಪಕ್ಷಗಳ ಬೆಂಬಲ ಬೇಡುತ್ತಿದ್ದರೆ, ಇತ್ತ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಕಾವೇರಿ ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರವನ್ನು ಒತ್ತಡಕ್ಕೆ ಸಿಲುಕಿಸಲು ಹೊರಟಿದೆ.

 
ನಿನ್ನೆ ಪ್ರಧಾನಿ ಮೋದಿಯವನ್ನು ಭೇಟಿ ಮಾಡಿದ ತಮಿಳುನಾಡು ಸಿಎಂ ಪಳನಿಸ್ವಾಮಿ ಕಾವೇರಿ ವಿಚಾರ ಪ್ರಸ್ತಾಪಿಸಿದ್ದಾರೆ. ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ ನ್ಯಾಯಾಧಿಕರಣದ ತೀರ್ಪು ಪಾಲನೆಗಾಗಿ ನಿಯಂತ್ರಣ ಸಮಿತಿ ರಚಿಸಬೇಕೆಂದು ಒತ್ತಾಯಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆಗೆ ಕೇಂದ್ರಕ್ಕೆ ತಮಿಳುನಾಡಿನ ಮತ ನಿರ್ಣಾಯಕವಾಗಲಿದೆ. ಇದನ್ನೇ ತಮಿಳುನಾಡು ದಾಳವಾಗಿ ಪ್ರಯೋಗಿಸುತ್ತಿದೆಯೇ ಎಂದು ಅನುಮಾನಗಳು ಮೂಡಿವೆ. ಕೇಂದ್ರವೂ ಎಐಎಡಿಎಂಕೆಯನ್ನು ಓಲೈಸಲು ಅವರ ಬೇಡಿಕೆ ಮಣಿಯಬಹುದು ಎಂಬ ಲೆಕ್ಕಾಚಾರ ಅವರದ್ದಾಗರಿಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ನಾನೇ ಅಭ್ಯರ್ಥಿ ಎಂದರೆ ಕಾಂಗ್ರೆಸ್ ನಾಯಕರಿಗೆ ಕಾದಿದೆ ಗ್ರಹಚಾರ