Select Your Language

Notifications

webdunia
webdunia
webdunia
webdunia

ಬೆಂಗಳೂರು ಶೇಮ್: ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ

molestation
ಬೆಂಗಳೂರು , ಸೋಮವಾರ, 20 ಫೆಬ್ರವರಿ 2017 (08:39 IST)
ಬೆಂಗಳೂರಿನಲ್ಲಿ ಮತ್ತೆ ಕಾಮುಕರು ದೌರ್ಜನ್ಯ ಮೆರೆದಿದ್ದಾರೆ. ಯುವತಿಯ ಮೇಲೆ ಬೈಕ್ ಸವಾರನೊಬ್ಬ ಮಾನಭಂಗಕ್ಕೆ ಯತ್ನಿಸಿದ ಘಟನೆ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಮ್ಮನಹಳ್ಳಿ ರಸ್ತೆಯಲ್ಲಿ ಫೆಬ್ರವರಿ 12 ರಂದು ಈ ಘಟನೆ ನಡೆದಿದ್ದು ಬಹಳ ತಡವಾಗಿ ಬೆಳಕಿಗೆ ಬಂದಿದೆ.
 
ಅಂದು ರಾತ್ರಿ ಹೊಟೆಲ್ ನಲ್ಲಿ ಊಟ ಮುಗಿಸಿಕೊಂಡು ಬರುತ್ತಿದ್ದ ಇಬ್ಬರು ಯುವತಿಯರ ಸಮೀಪ ಬಂದು ನಿಂತ ಪಲ್ಸರ್ ಬೈಕ್ ಸವಾರನೋರ್ವ ಒಬ್ಬಾಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಬಳಿಕ ಆಕೆಯ ಬಟ್ಟೆ ಹರಿದು ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ. ಆ ಸಂದರ್ಭದಲ್ಲಿ ಯುವತಿಯರು ಕಿರುಚಿಕೊಂಡಿದ್ದರಿಂದ ಆರೋಪಿ ಪರಾರಿಯಾಗಿದ್ದಾನೆ.
 
ಈ ರಸ್ತೆಯಲ್ಲಿ ಚೈನ್ ಸ್ನೆಚಿಂಗ್, ಲೈಂಗಿಕ ದೌರ್ಜನ್ಯ, ಹಿಟ್ ಆ್ಯಂಡ್ ರನ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ ಎನ್ನುತ್ತಾರೆ ಸ್ಥಳೀಯರು.
 
ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಪನ್ನೀರ್‌ಗಾಗಿ ಪ್ರಾಣ ಬಿಟ್ಟ ಅಭಿಮಾನಿ