Select Your Language

Notifications

webdunia
webdunia
webdunia
webdunia

ಬಿಎಸ್‌ವೈಗೆ ಸೆಡ್ಡುಹೊಡೆಯಲು ಮತ್ತೆ ಬ್ರಿಗೇಡ್ ಮೊರೆಹೋದ ಈಶ್ವರಪ್ಪ

ಬಿಎಸ್‌ವೈಗೆ ಸೆಡ್ಡುಹೊಡೆಯಲು ಮತ್ತೆ ಬ್ರಿಗೇಡ್ ಮೊರೆಹೋದ ಈಶ್ವರಪ್ಪ
ಬೆಂಗಳೂರು , ಬುಧವಾರ, 19 ಏಪ್ರಿಲ್ 2017 (17:54 IST)
ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಎಂದು ಮುನಿಸಿಕೊಂಡಿರುವ ಕೆ.ಎಸ್.ಈಶ್ವರಪ್ಪ, ರಾಜ್ಯದಾದ್ಯಂತ ರಾಯಣ್ಣ ಯುವ ಬ್ರಿಗೇಡ್‌ ಸಂಘಟಿಸಿ ಸೆಡ್ಡುಹೊಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
 
ಯಡಿಯೂರಪ್ಪ ಉದ್ದೇಶಪೂರ್ವಕವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಆತಂಕಗೊಂಡಿರುವ ಈಶ್ವರಪ್ಪ, ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆಯನ್ನು ವಿಸ್ತರಿಸಿ ಬಲವನ್ನು ಹೆಚ್ಚಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಪ್ರತಿಯೊಂದು ಜಿಲ್ಲೆಯಲ್ಲೂ ಬ್ರಿಗೇಡ್‌ನ ಯುವ ಘಟಕಗಳನ್ನು ರಚಿಸಿ ಪದಾಧಿಕಾರಿಗಳನ್ನು ಘೋಷಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಒಂದೊಂದು ತಂಡದಲ್ಲಿ ಅಹಿಂದ್ ಮತ್ತು ಅತೃಪ್ತ ಬಿಜೆಪಿ ಯುವಕರಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ.
 
ಶಾಸಕರ ಭವನದಲ್ಲಿ ನಡೆದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಪೂರ್ವ ಸಿದ್ದತೆ ಸಭೆಯಲ್ಲಿ ಯುವ ಘಟಕ ರಚನೆ ಕುರಿತಂತೆ  ಚರ್ಚೆ ನಡೆಸಲಾಗಿದೆ. ನಾಳೆ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಈಶ್ವರಪ್ಪ ತಿಳಿಸಿದ್ದಾರೆ. 
 
ಸಭೆಯಲ್ಲಿ ಬ್ರಿಗೇಡ್‌ನ ಗೌರವಾಧ್ಯಕ್ಷ ಮುಕುಡಪ್ಪ, ಅಧ್ಯಕ್ಷ ವೀರುಪಾಕ್ಷಪ್ಪ ಸೇರಿದಂತೆ ಇತರ ಗಣ್ಯರು ಉಪಸ್ಥಿತಿರಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅರಣ್ಯ ಸಚಿವರನ್ನು ಬೀದಿನಾಯಿಗೆ ಹೋಲಿಸಿದ ಅರಣ್ಯ ಸಿಬ್ಬಂದಿ