Select Your Language

Notifications

webdunia
webdunia
webdunia
webdunia

ಮತ್ತೆ ಗಗನ ಕುಸುಮವಾದ ಟೊಮೆಟೊ : 200ರ ಗಡಿಯತ್ತ ಕೆಂಪು ರಾಣಿ

ಮತ್ತೆ ಗಗನ ಕುಸುಮವಾದ ಟೊಮೆಟೊ : 200ರ ಗಡಿಯತ್ತ ಕೆಂಪು ರಾಣಿ
ಬೆಂಗಳೂರು , ಸೋಮವಾರ, 31 ಜುಲೈ 2023 (11:36 IST)
ಬೆಂಗಳೂರು : ನಾಡಿನ ಗೃಹಿಣಿಯರಿಗೆ ಮತ್ತೆ ಟೊಮೆಟೊ ದರ ಏರಿಕೆ ಶಾಕ್ ಕೊಟ್ಟಿದೆ. ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಟೊಮೆಟೊ ಬೆಲೆಯಂತೋ 200ರ ಗಡಿಯತ್ತ ಓಡುತ್ತಿದೆ.
 
ಇಷ್ಟು ದಿನ 100 ರ ಆಸುಪಾಸಿನಲ್ಲಿ ಇದ್ದಂತಹ ಟೊಮೆಟೊ ದರ ಇದ್ದಕ್ಕಿಂದ್ದಂತೆ 140-160 ರೂಗೆ ಜಿಗಿದಿದೆ. ಮತ್ತೆ ಕೆಲವು ಕಡೆ 200 ರೂ. ಗಡಿ ತಲುಪಿದೆ. ಟೊಮೆಟೊ ಮಾರಾಟಗಾರರಿಗೆ ಶುಕ್ರದೆಸೆ, ಗ್ರಾಹಕರಿಗೆ ವಕ್ರದೆಸೆಯಂತಾಗಿದೆ.

ಟೊಮೆಟೊ ಬಿತ್ತನೆ ಕಡಿಮೆಯಾಗಿದ್ದು ದರ ಏರಿಕೆಯಾಗಿದೆ. ಮೂರು ತಿಂಗಳಿನಿಂದ ಟೊಮೆಟೊ ಬೆಲೆ ಕಡಿಮೆಯಾಗುತ್ತೆ ಅಂತ ಜನರು ಕಾಯ್ತಾ ಇದ್ರು. ಆದ್ರೆ ಟೊಮೆಟೊ ಬೆಲೆ ಏರಿಕೆಯಾಗುತ್ತಲೇ ಇದೆ. ಕೆಜಿಗೆ 150 ರಿಂದ 160 ರೂಪಾಯಿಗೆ ತಲುಪಿದೆ. ಕಳೆದ ಒಂದು ವಾರದ ಹಿಂದೆ 80-90 ರೂ ಇತ್ತು. ಬಳಿಕ 100ರ ಗಡಿ ದಾಟಿತ್ತು. ಆದ್ರೆ ಈಗ 200ರೂ ಸಮೀಪಿಸುತ್ತಿದೆ.

ಪೂರೈಕೆ ಕಡಿಮೆ ಆಗಿರುವ ಹಿನ್ನಲೆ ಮತ್ತೆ ಟೊಮೆಟೊ ದರ ಏರಿಕೆಯಾಗಿದೆ. ಟೊಮೆಟೊ ದರ ಏರಿದ್ದರಿಂದ ರೈತರು ಸಂತೋಷಗೊಂಡಿದ್ದು ಗ್ರಾಹಕರು ಕಂಗಾಲಾಗಿದ್ದಾರೆ. ಬೆಂಗಳೂರಿನ ಕೆ.ಆರ್. ಮಾರ್ಕೆಟ್ನಲ್ಲಿ ಟೊಮೆಟೊಗೆ 140 ರೂಪಾಯಿ ಇದೆ.

ಇನ್ನು ಒಂದು ತಿಂಗಳು ಇದೇ ರೀತಿಯ ಬೆಲೆ ಇರುತ್ತೆ ಎಂದು ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ. ನೆರೆ ರಾಜ್ಯಗಳಲ್ಲಿ ವಿಪರೀತ ಮಳೆ ಇರುವ ಹಿನ್ನೆಲೆ ಟೊಮೆಟೊ ಬೆಳೆ ನಾಶವಾಗಿದೆ. ಹೀಗಾಗಿ ಉತ್ತರ ಭಾರತದಿಂದ ಭಾರಿ ಬೇಡಿಕೆ ಇದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದ ಕರಾವಳಿ ಭಾಗದಲ್ಲಿ ಮತ್ತೆ ಮಳೆಯ ಅಬ್ಬರ