Select Your Language

Notifications

webdunia
webdunia
webdunia
webdunia

ತಬ್ಲಿಘಿ ನಂತರ ಈ ಜಿಲ್ಲೆಗೆ ಶುರುವಾಯ್ತು ಮುಂಬೈ ಕಾಟ

ತಬ್ಲಿಘಿ ನಂತರ ಈ ಜಿಲ್ಲೆಗೆ ಶುರುವಾಯ್ತು ಮುಂಬೈ ಕಾಟ
ಕಲಬುರಗಿ , ಭಾನುವಾರ, 17 ಮೇ 2020 (19:50 IST)
ಮುಂಬೈನಿಂದ ವಲಸೆ ಬಂದ ಕಾರ್ಮಿಕರು ಸೇರಿ ಹೊಸ 10 ಕೊರೋನಾ ಸೋಂಕು‌ ಪತ್ತೆಯಾಗಿದ್ದಾರೆ.

ಕಲಬುರಗಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 104 ಕ್ಕೆ ಏರಿದೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

ಕಲಬುರಗಿ ನಗರದ ರೋಜಾ‌ (ಬಿ) ಪ್ರದೇಶದ 35 ವರ್ಷದ ಮಹಿಳೆ (P-1129-ಸೋಂಕಿನ ಜಾಲ ಪತ್ತೆ‌ ಕಾರ್ಯ ಮುಂದುವೆರೆದಿದೆ), ಕಂಟೇನ್ ಮೆಂಟ್ ಝೋನ್ ಸಂಪರ್ಕಕ್ಕೆ‌ ಬಂದ ವಿಶಾಲ ನಗರದ 55 ವರ್ಷದ ಪುರುಷ (P-1130), ರೋಗಿ ಸಂಖ್ಯೆ-927 ಸಂಪರ್ಕಕ್ಕೆ ಬಂದ ಕಲಬುರಗಿಯ ಮೋಮಿನಪುರದ ಸದರ ಮೋಹಲ್ಲಾ ಪ್ರದೇಶದ 55 ವರ್ಷದ ಪುರುಷ (P-1132) ಮತ್ತು 50 ವರ್ಷದ ಮಹಿಳೆಗೆ (P-1134) ಕೋವಿಡ್-19 ಸೋಂಕು ತಗುಲಿದೆ.

ಮಹಾರಾಷ್ಟ್ರದ ಮುಂಬೈ ಪ್ರವಾಸ ಹಿನ್ನೆಲೆಯಲ್ಲಿ ಚಿಂಚೋಳಿ ತಾಲೂಕಿನ ಕೊಂಚಾವರಂನ ಸಂಗಾಪುರ ತಾಂಡಾ‌ ಮೂಲದ 10 ವರ್ಷದ ಬಾಲಕ (P-1131), ಕಾಳಗಿ ತಾಲೂಕಿನ ಅರಣಕಲ್ ತಾಂಡಾ‌ ಮೂಲದ  36 ವರ್ಷದ ಯುವಕ (P-1133) ಮತ್ತು 7 ವರ್ಷದ ಬಾಲಕನಿಗೂ (P-1136) ಮಹಾಮಾರಿ ಸೋಂಕು ಅಂಟುಕೊಂಡಿದೆ.

ಇನ್ನೂ ಮುಂಬೈ ಪ್ರವಾಸ ಹಿನ್ನೆಲೆಯಿಂದ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಆಳಂದ ತಾಲೂಕಿನ ಧಂಗಾಪೂರ ಮೂಲದ 13 ವರ್ಷದ ಬಾಲಕ (P-1135), 40 ವರ್ಷದ ಪುರುಷ (P-1137) ಹಾಗೂ  55 ವರ್ಷದ ಪುರುಷ (P-1138) ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ.

ಇದರಿಂದ ಜಿಲ್ಲೆಯಲ್ಲಿ ಕೊರೋನಾ‌ ಪೀಡಿತ 104 ರೋಗಿಗಳಲ್ಲಿ 7 ಜನ ನಿಧನ‌ರಾಗಿದ್ದು, 51 ರೋಗಿ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ‌. ಉಳಿದಂತೆ 46 ರೋಗಿಗಳಿಗೆ ಚಿಕಿತ್ಸೆ‌ ಮುಂದುವರೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಆರೋಗ್ಯ ಕಾರ್ಯಕರ್ತರಿಗೆ ಕ್ವಾರಂಟೈನ್ ಅಗತ್ಯವಿಲ್ಲ ಎಂದ ಜಿಲ್ಲಾಧಿಕಾರಿ