Select Your Language

Notifications

webdunia
webdunia
webdunia
webdunia

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಿಕೆ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪರೀಕ್ಷೆ ಮುಂದೂಡಿಕೆ
ಬೆಂಗಳೂರು , ಗುರುವಾರ, 1 ಜೂನ್ 2017 (19:12 IST)
ಬೆಂಗಳೂರು:ಮರುಮೌಲ್ಯಮಾಪನ ಫಲಿತಾಂಶವನ್ನು ತಡವಾಗಿ ಬಿಡುಗಡೆ ಮಾಡಿದ್ದನ್ನು  ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಮನಿದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಈ ತಿಂಗಳು ಆರಂಭವಾಗಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿದೆ.
 
ಅಂತಿಮ ಬಿಇ ವರ್ಷದ ಪರೀಕ್ಷೆಗಳು ಇದೇ 5ರಂದು ಆರಂಭವಾಗಬೇಕಿದ್ದು, ಅದನ್ನು ಮುಂದೂಡಲಾಗಿದ್ದು ಇದೇ 12ರಂದು ನಡೆಯಲಿದೆ ಎಂದು ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಕರಿಸಿದ್ದಪ್ಪ ತಿಳಿಸಿದ್ದಾರೆ.
 
ಇತರ ಕೆಳ ಹಂತದ ಸೆಮೆಸ್ಟರ್ ಪರೀಕ್ಷೆಗಳು ಜೂನ್ 23ರಂದು ಆರಂಭವಾಗಲಿದೆ. ಪದವಿ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ಜುಲೈ 31ರಂದು ಮುಗಿಯಲಿದೆ ಎಂದು ತಿಳಿಸಿದರು. ವಿವರವಾದ ವೇಳಾಪಟ್ಟಿ ಇದೇ 3ರಂದು ಘೋಷಿಸಲಾಗುವುದು ಎಂದು ಹೇಳಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣಾ ಚಿಹ್ನೆ ಪ್ರಕರಣ: ಟಿಟಿವಿ ದಿನಕರನ್ ಗೆ ಜಾಮೀನು