Select Your Language

Notifications

webdunia
webdunia
webdunia
webdunia

ಪತ್ನಿ ಕನ್ಯತ್ವ ಪರೀಕ್ಷೆಯಲ್ಲಿ ಪಾಸಾಗಿದ್ದರೂ ಕಿರುಕುಳ ನೀಡುತ್ತಿದ್ದ ಪತಿಯ ಬಂಧನ

ಪತ್ನಿ ಕನ್ಯತ್ವ ಪರೀಕ್ಷೆಯಲ್ಲಿ ಪಾಸಾಗಿದ್ದರೂ ಕಿರುಕುಳ ನೀಡುತ್ತಿದ್ದ ಪತಿಯ ಬಂಧನ
ಬೆಂಗಳೂರು , ಮಂಗಳವಾರ, 24 ಮೇ 2016 (13:40 IST)
ವಿವಾಹಕ್ಕೆ ಎರಡು ತಿಂಗಳ ಮುಂಚೆ ವಿಜ್ಞಾನಿ ಪತಿಯ ಆದೇಶದಂತೆ ಸಾಫ್ಟ್‌ವೇರ್ ವೃತ್ತಿಯಲ್ಲಿರುವ ಮೇಘನಾ ಕನ್ಯತ್ವ ಪರೀಕ್ಷೆಗೊಳಪಟ್ಟು ಪಾಸ್‌ ಆಗಿದ್ದರೂ ಕಿರುಕುಳ ನಿಲ್ಲದ ಹಿನ್ನೆಲೆಯಲ್ಲಿ, ಪತಿಯ ವಿರುದ್ಧ ಪತ್ನಿಯೇ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ವರದಿಯಾಗಿದೆ.
 
ಕಳೆದ 2011ರಲ್ಲಿ ವಿವಾಹಕ್ಕೆ ಎರಡು ತಿಂಗಳ ಮುಂಚೆ ಕನ್ಯತ್ವ ಪರೀಕ್ಷೆಯಲ್ಲಿ ಪಾಸ್ ಆಗುವಂತೆ ಭಾವಿಪತಿ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಮೇಘಾ, ರಾಜಾಜಿನಗರ ಆಸ್ಪತ್ರೆಯಲ್ಲಿ ಕನ್ಯತ್ವ ಪರೀಕ್ಷೆಗೊಳಪಟ್ಟು ಪಾಸಾದ ನಂತರ ವಿವಾಹ ಬಂಧನ ಏರ್ಪಟ್ಟಿತ್ತು. 
 
ಕನ್ಯತ್ವ ಪರೀಕ್ಷೆಯಲ್ಲಿ ಪಾಸಾಗಿದ್ದರೂ ಪತ್ನಿ ತನ್ನನ್ನು ವಂಚಿಸುತ್ತಿದ್ದಾಳೆ ಎಂದು ನಿರಂತರವಾಗಿ ಪತಿ ಶಂಕಿಸುತ್ತಿರುವುದಲ್ಲದೇ ಆಕೆಗೆ ಮಾನಸಿಕವಾಗಿ ಕಿರುಕುಳ ಕೊಡಲು ಆರಂಭಿಸಿದ್ದ ಎನ್ನಲಾಗಿದೆ.  
 
ಪತಿಯ ಕಿರುಕುಳವನ್ನು ಐದು ವರ್ಷಗಳಿಂದ ನಿರಂತರವಾಗಿ ತಾಳಿದ ಪತ್ನಿ ಮೇಘಾ, ಕೊನೆಗೂ ಆತನ ಹಿಂಸೆಯನ್ನು ತಾಳದೆ ಪತಿ ಮತ್ತು ಅತ್ತೆಮಾವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
 
ಮೇಘಾಳ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಪತಿ ಮತ್ತು ಅತ್ತೆಮಾವನ ವಿರುದ್ಧ ವರದಕ್ಷಿಣೆ ಕಿರುಕುಳ ದಾಖಲಿಸಿದ್ದಾರೆ.
 
ಪೊಲೀಸ್ ಮೂಲಗಳ ಪ್ರಕಾರ, ಕಳೆದ 2011ರಲ್ಲಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಸಂಪರ್ಕಕ್ಕೆ ಬಂದಿದ್ದರು. ವಿದೇಶದಲ್ಲಿ ಪಿಎಚ್‌ಡಿ ಮಾಡುತ್ತಿದ್ದ ವಿಜ್ಞಾನಿ ಪತಿ ಭಾರತಕ್ಕೆ ರಜೆಯ ಮೇಲೆ ಬಂದಾಗ ನಿಶ್ಚಿತಾರ್ಥವಾಗಿತ್ತು. 
 
ನಿಶ್ಚಿತಾರ್ಥದ ನಂತರ ಮೇಘಾ ತನ್ನ ಫೇಸ್‌ಬುಕ್‌ನಲ್ಲಿ ಗೆಳೆಯ ಗೆಳತಿಯರೊಂದಿಗೆ ಅನೇಕ್ ಫೋಟೋಗಳನ್ನು ಪೋಸ್ಟ್ ಮಾಡಿದ್ದಳು. ಇದರಿಂದ ಅನುಮಾನಗೊಂಡ ಭಾವಿಪತಿ, ಆಕೆಗೆ ನನ್ನನ್ನು ವಿವಾಹವಾಗಬೇಕಾದಲ್ಲಿ ಕನ್ಯತ್ವ ಪರೀಕ್ಷೆಗೊಳಪಡಬೇಕು ಎಂದು ಷರತ್ತು ವಿಧಿಸಿದ್ದಾನೆ.
 
ಪತಿಯ ಷರತ್ತು ಕೇಳಿ ಆಘಾತಗೊಂಡಿದ್ದರೂ ನಾನು ಕನ್ಯೆ ಎಂದು ಹೇಳಿದಲ್ಲಿ ಅವರು ನಂಬುವ ಸ್ಥಿತಿಯಲ್ಲಿರಲಿಲ್ಲ. ಆದ್ದರಿಂದ ಕನ್ಯತ್ವ ಪರೀಕ್ಷೆಗೊಳಪಡಲು ನಿರ್ಧರಿಸಿದೆ. ಕನ್ಯತ್ವ ಪರೀಕ್ಷೆಯಲ್ಲಿ ಪಾಸಾಗಿದ್ದರೂ ಪತಿ ಸಂಶಯ ಪಿಶಾಚಿಯಂತೆ ಪ್ರತಿಯೊಂದರಲ್ಲಿ ಅನುಮಾನ ವ್ಯಕ್ತಪಡಿಸುತ್ತಿದ್ದ ಎಂದು ಮೇಘಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. 

 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಸಭೆಗೆ ವೆಂಕಯ್ಯ ನಾಯ್ಡು ಅಯ್ಕೆ ವಿರೋಧಿಸಿ ಕರವೇ ಪ್ರತಿಭಟನೆ