Select Your Language

Notifications

webdunia
webdunia
webdunia
webdunia

ನಾನು ಬಾಯ್ಬಿಟ್ಟರೆ ಎಲ್ಲೆಲ್ಲಿ, ಏನೇನೋ ಆಗಿಬಿಡುತ್ತದೆ: ಡಿ.ಕೆ.ಶಿವಕುಮಾರ್

ಡಿ.ಕೆ.ಶಿವಕುಮಾರ್
ಬಿಜೆಪಿಗೆ ಆಹ್ವಾನ ನೀಡಿರುವ ವಿಚಾರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್, ನಾನು ಬಾಯ್ಬಿಟ್ಟರೆ ಎಲ್ಲೆಲ್ಲಿ, ಏನೇನೋ ಆಗಿಬಿಡುತ್ತದೆ ಎಂದು ತಿರುಗೇಟು ನೀಡಿದ್ದಾರೆ.
 
ನಾನು ಬಾಯ್ಬಿಟ್ಟರೆ ಎಲ್ಲೆಲ್ಲಿ, ಏನೇನೋ ಆಗಿಬಿಡುತ್ತದೆ. ಆದ್ದರಿಂದ, ಸದ್ಯಕ್ಕೆ ಆ ವಿಚಾರ ಮಾತನಾಡೋದು ಬೇಡ ಎಂದು ತಿಳಿಸಿದ್ದಾರೆ. ಸದ್ಯದಲ್ಲಿಯೇ ಹೊಸ ಬಾಂಬ್ ಸಿಡಿಸುತ್ತಾರೆ ಎನ್ನುವ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
 
ಗುಜರಾತ್ ಚುನಾವಣೆ ಫಲಿತಾಂಶ ಬಂದ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ಬಹಿರಂಗಪಡಿಸುತ್ತೇನೆ ಎಂದು ಹೇಳಿದ್ದಾರೆ.
 
ಕೇಂದ್ರ ಸಚಿವರೊಬ್ಬರು ಡಿ.ಕೆ.ಶಿವಕುಮಾರ್‌ಗೆ ದೂರವಾಣಿ ಕರೆ ಮಾಡಿ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವಂತೆ ಆಹ್ವಾನ ನೀಡಿದ್ದರೂ ಎನ್ನುವ ವರದಿಗಳಿಗೆ ಸಚಿವ ಡಿ.ಕೆ.ಶಿವಕುಮಾರ್ ಇಂದು ಪ್ರತಿಕ್ರಿಯೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗಂಡನ ಮುಂದೆಯೇ ಬೆತ್ತಲೆಗೊಳಿಸಿ ಹೀನ ಕೃತ್ಯ ಎಸಗಿದರು..!