Publish Date: Wed, 22 Jun 2016 (16:03 IST)
Updated Date: Wed, 22 Jun 2016 (16:05 IST)
ಸಂಪುಟ ಪುನಾರಚನೆಯಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಂಬರೀಶ್ ರಾಜೀನಾಮೆ ನೀಡಿರುವ ವಿಚಾರ ತಣ್ಣಗಾಗುವ ಮೊದಲೇ ಅಫ್ಜಲ್‌ಪುರ್ ಕ್ಷೇತ್ರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಕೂಡಾ ನಾಳೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.,
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ್ ಖರ್ಗೆಯವರ ಸ್ವಾರ್ಥದಿಂದಾಗಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ನಾಶವಾಗುತ್ತಿದೆ. ಒಬ್ಬರಿಗೆ ಅಧಿಕಾರದ ಮದವೇರಿದರೆ ಮತ್ತೊಬ್ಬರಿಗೆ ಪುತ್ರ ವ್ಯಾಮೋಹ ಹೆಚ್ಚಾಗಿದೆ ಎಂದು ಗುಡುಗಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ಮುಕ್ತಗೊಳಿಸಲು ವಿರೋಧ ಪಕ್ಷಗಳು ಬೇಕಾಗಿಲ್ಲ. ಇಂತಹ ನಾಯಕರಿದ್ದರೆ ಕಾಂಗ್ರೆಸ್ ತನ್ನಿಂದ ತಾನೇ ನಾಶವಾಗಿ ಹೋಗುತ್ತದೆ ಎಂದು ಅಬ್ಬರಿಸಿದ್ದಾರೆ. ನಾಳೆ ಬೆಂಗಳೂರಿಗೆ ತೆರಳಿ ಉಪಸಭಾಪತಿ ಶಿವಶಂಕರ್ ರೆಡ್ಡಿಯವರಿಗೆ ಶಾಸಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ವಿನಾಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಸದ ಮಲ್ಲಿಕಾರ್ಜುನ ಖರ್ಗೆ ನೇರ ಕಾರಣವಾಗಿದ್ದಾರೆ ಎಂದು ಅಫ್ಜಲ್‌ಪುರ್ ಕ್ಷೇತ್ರದ ಶಾಸಕ ಮಾಲೀಕಯ್ಯ ಗುತ್ತೇದಾರ್ ಆರೋಪಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ