Select Your Language

Notifications

webdunia
webdunia
webdunia
webdunia

ಇಂದು ಗಣಿಧಣಿ ಜನಾರ್ಧನ ರೆಡ್ಡಿ ಬಳ್ಳಾರಿಗೆ ಪ್ರವೇಶ

ಜನಾರ್ದನ ರೆಡ್ಡಿ
ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲುವಾಸಿಯಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಇಂದು ಬಳ್ಳಾರಿಗೆ ಆಗಮಿಸಲಿದ್ದಾರೆ.
 
ಪುತ್ರಿಯ ವಿವಾಹ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಬಳ್ಳಾರಿಗೆ ತೆರಳಲು ಅನುಮತಿ ಪಡೆದಿರುವ ರೆಡ್ಡಿ, ಬರೋಬ್ಬರಿ 5 ವರ್ಷಗಳ ನಂತರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.
 
ಜನಾರ್ದನ ರೆಡ್ಡಿ ಮಗಳು ಬ್ರಹ್ಮಿಣಿ ಮದುವೆ ಸಂಬಂಧ ಹುಟ್ಟೂರಿಗೆ ರೆಡ್ಡಿ ಬರುತ್ತಿದ್ದಾರೆ.ರೆಡ್ಡಿಯವರ ಸ್ವಾಗತಕ್ಕೆ ಅವರ ಅಭಿಮಾನಿಗಳು ಭರ್ಜರಿ ಸಿದ್ದತೆ ನಡೆಸಿದ್ದಾರೆ.
 
ರೆಡ್ಡಿಯವರ ಕಟ್ಟಾ ಬೆಂಬಲಿಗರಾದ ಸಂಸದ ಶ್ರೀ ರಾಮುಲು ಸೇರಿದಂತೆ ಇತರೆ ಆತ್ಮಿಯ ಮುಖಂಡರು ಕಾರ್ಯಕ್ರಮಗಳಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

2000ಕ್ಕೂ ಹೆಚ್ಚು ತೀರ್ಪನ್ನು ಕನ್ನಡದಲ್ಲಿಯೇ ನೀಡಿದ ಮಾದರಿ ನ್ಯಾಯಾಧೀಶ!