Daily Horoscope

Select Your Language

Notifications

webdunia
webdunia
webdunia
webdunia

ವಿಮಾನದಲ್ಲಿ ಬನ್ನೇರುಘಟ್ಟ ಉದ್ಯಾನಕ್ಕೆ ಆಗಮಿಸಿದ ದ.ಆಫ್ರಿಕಾದ ಕೋತಿಗಳು

Bannerghatta National Park
Photo Credit X
ಆನೇಕಲ್: ಡಿಸೆಂಬರ್ ತಿಂಗಳ ಕ್ರಿಸ್‌ಮಸ್ ರಜೆಯಲ್ಲಿ ಬನ್ನೇರುಘಟ್ಟ ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಹೊಸ ಅತಿಥಿಯನ್ನು ನೀಡಬಹುದು. 

ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆ ಅಡಿ ದಕ್ಷಿಣ ಆಫ್ರಿಕಾದ ಇಂದುನಾ ಪ್ರೈಮೇಟ್‌ ಮತ್ತು ಪ್ಯಾರಟ್‌ ಪಾರ್ಕ್‌ನಿಂದ ಬಂದ ಎಂಟು ಕಪ್ಪು ಟೋಪಿಯ ಕ್ಯಾಪುಚಿನ್‌ ಕೋತಿಗಳ ಆಗಮನವಾಗಿದೆ. 

ಭಾನುವಾರ ರಾತ್ರಿ ಉದ್ಯಾನದ ಸಿಬ್ಬಂದಿ ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. 

ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು ಸೇರಿದಂತೆ ಒಟ್ಟು ಎಂಟು ಕ್ಯಾಪುಚಿನ್‌ ಕೋತಿಗಳನ್ನು ದಕ್ಷಿಣ ಆಫ್ರಿಕಾದ ಅಧಿಕಾರಿಗಳು  ಬನ್ನೇರುಘಟ್ಟಕ್ಕೆ ಹಸ್ತಾಂತರಿಸಿದರು.

ಕೋತಿಗಳನ್ನು ಕ್ವಾರೆಂಟೈನ್‌ನಲ್ಲಿ ಇಡಲಾಗಿದೆ. ಸಂಪೂರ್ಣ ಆರೋಗ್ಯ ಪರಿಶೀಲನೆಯ ಬಳಿಕ ಸಾರ್ವಜನಿಕ ಪ್ರದರ್ಶನಕ್ಕೆ ಮೃಗಾಲಯದ ಆವರಣಗಳಿಗೆ ಸ್ಥಳಾಂತರಿಸಲಾಗುವುದು ಎಂದು ಬನ್ನೇರುಘಟ್ಟ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್‌ ತಿಳಿಸಿದರು.

ಮೃಗಾಲಯದ ಪ್ರಾಣಿಗಳ ಅನುವಂಶಿಕ ವೈವಿಧ್ಯತೆ ಹೆಚ್ಚಿಸುವುದು, ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವುದು ಹಾಗೂ ವೈಜ್ಞಾನಿಕ ಸಂಶೋಧನೆಗೆ ಬೆಂಬಲ ನೀಡುವ ಸಲುವಾಗಿ ಅಂತರರಾಷ್ಟ್ರೀಯ ಪ್ರಾಣಿ ವಿನಿಮಯ ಯೋಜನೆಯಡಿಯಲ್ಲಿ ಪ್ರಾಣಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗೃಹಲಕ್ಷ್ಮಿಯ 5 ಸಾವಿರ ಕೋಟಿ ಪಟಾಪಟ್ ಲೂಟಿ ಹೊಡೆದರು: ಆರ್.ಅಶೋಕ್ ಟೀಕೆ