Webdunia - Bharat's app for daily news and videos

Install App

ವಾರ್ಷಿಕ ಅಮರನಾಥ ಯಾತ್ರೆಗೆ ಶುರುವಾಗಿದೆ ಮುಂಗಡ ನೋಂದಣಿ, ಜೂನ್‌ 29ರಿಂದ ಯಾತ್ರೆ ಶುರು

Sampriya
ಸೋಮವಾರ, 15 ಏಪ್ರಿಲ್ 2024 (14:33 IST)
Photo Courtesy Facebook
ಕಾಶ್ಮೀರ:  ದಕ್ಷಿಣ ಕಾಶ್ಮೀರದಲ್ಲಿರುವ 3,880 ಮೀಟರ್ ಎತ್ತರದ ಗುಹಾ ದೇಗುಲಕ್ಕೆ ತೆರಳುವ 52 ದಿನಗಳ ವಾರ್ಷಿಕ ಅಮರನಾಥ ಯಾತ್ರೆಯು ಜೂನ್ 29 ರಂದು ಪ್ರಾರಂಭವಾಗಿ ಆಗಸ್ಟ್ 19 ರಂದು ಮುಕ್ತಾಯಗೊಳ್ಳಲಿದೆ. ಯಾತ್ರೆಗೆ ಸೋಮವಾರ ಮುಂಗಡ ನೋಂದಣಿ ಆರಂಭವಾಗಿದೆ.

ಅಮರನಾಥ ಯಾತ್ರೆಯ ಪ್ರಯಾಣವನ್ನು ಎರಡು ಮಾರ್ಗಗಳ ಮೂಲಕ ಕೈಗೊಳ್ಳಬಹುದು. ದಕ್ಷಿಣ ಕಾಶ್ಮೀರದ ಅನಂತನಾಗ್‌ನ ಪಹಲ್ಗಾಮ್ ಮೂಲಕ 48-ಕಿಮೀ ಮಾರ್ಗದಲ್ಲಿ ಮತ್ತು ಮಧ್ಯ ಕಾಶ್ಮೀರದ ಗಂಡರ್‌ಬಾಲ್ ಜಿಲ್ಲೆಯಿಂದ ಬಾಲ್ಟಾಲ್‌ ಮೂಲಕ 14 ಕಿಮೀ ಮಾರ್ಗದಲ್ಲಿ ತೆರಳಬಹುದು. ಆದರೆ ಈ ಮಾರ್ಗ ಕಡಿದಾದ ಹಾದಿಯನ್ನು ಹೊಂದಿದೆ ಎಂದು ಅಮರನಾಥ ಶ್ರೈನ್ ಬೋರ್ಡ್ (ಎಸ್‌ಎಎಸ್‌ಬಿ) ಪ್ರಕಟಣೆ ತಿಳಿಸಿದೆ.

ಮುಂಗಡ ನೋಂದಣಿ ಇಂದು ಜಮ್ಮುವಿನ ಬ್ಯಾಂಕ್ ಶಾಖೆಗಳಲ್ಲಿ ಆರಂಭವಾಗಿದೆ. ದೇಶಾದ್ಯಂತ ಪಿಎನ್‌ಬಿಯ (ಪಂಜಾಬ್ ನ್ಯಾಷನಲ್ ಬ್ಯಾಂಕ್) 540 ಶಾಖೆಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು ಎಂದು ಎಸ್‌ಎಎಸ್‌ಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾತ್ರೆಗೆ 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಥವಾ 75 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಆರು ವಾರ ತುಂಬಿದ ಗರ್ಭಿಣಿಯರು ನೋಂದಣಿ ಮಾಡಿಕೊಳ್ಳುವಂತಿಲ್ಲ ಎಂದು ಬೋರ್ಡ್‌ ಪ್ರಕಟಣೆ ತಿಳಿಸಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments