ಕಾಂಗ್ರೆಸ್ ಪ್ರಚಾರಕ್ಕೆ ನಟಿ ರಮ್ಯಾ ಎಂಟ್ರಿ

Krishnaveni K
ಶನಿವಾರ, 23 ಮಾರ್ಚ್ 2024 (12:33 IST)
Photo Courtesy: Twitter
ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ಮಾಡಲು ಸ್ಟಾರ್ ಕಾಂಪೈನರ್ ಗಳ ಲಿಸ್ಟ್ ರೆಡಿಯಾಗಿದೆ. ಈಗ ಸ್ಟಾರ್ ಕಾಂಪೈನರ್ ಗಳ ಪಟ್ಟಿಯಲ್ಲಿ ರಮ್ಯಾ ಹೆಸರೂ ಇದೆ ಎನ್ನಲಾಗಿದೆ.

ನಟಿ ರಮ್ಯಾ ಈ ಹಿಂದೆ ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದವರು, ಸಂಸದರಾಗಿಯೂ ಆಯ್ಕೆಯಾಗಿದ್ದರು. ಆದರೆ ಅದಾದ ಬಳಿಕ ರಮ್ಯಾ ರಾಜಕೀಯ, ಸಿನಿಮಾದಿಂದ ದೂರವುಳಿದಿದ್ದರು. ಈ ನಡುವೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಸ್ಟಾರ್ ಪ್ರಚಾರಕಿಯಾಗಿದ್ದರು.

ಇದೀಗ ರಮ್ಯಾರನ್ನು ಮಂಡ್ಯ ಮತ್ತು ಮೈಸೂರು ಕ್ಷೇತ್ರದಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಕರೆತರಲು ಪ್ರಯತ್ನ ನಡೆಸಲಾಗಿದೆ. ರಮ್ಯಾಗೆ ಮಂಡ್ಯ, ಮೈಸೂರು ಭಾಗದಲ್ಲಿ ಜನ ಬೆಂಬಲವಿದೆ. ಯುವ ಮತದಾರರನ್ನು ಸೆಳೆಯಲು ಅವರು ಸೂಕ್ತ ಎಂಬ ಕಾರಣಕ್ಕೆ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಗೆ ಸೇರಿಸಲಾಗಿದೆ.

ರಮ್ಯಾ ಈ ಮೊದಲು ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿಗಳಿತ್ತು. ಆದರೆ ರಮ್ಯಾ ಬದಲು ಸ್ಟಾರ್ ಚಂದ್ರುಗೆ ಮಣೆ ಹಾಕಲಾಯಿತು. ಇದೀಗ ಚುನಾವಣೆಗೆ ಸ್ಪರ್ಧಿಸದೇ ಇದ್ದರೂ ಪ್ರಚಾರಕಿಯಾಗಿ ಬಳಸಿಕೊಳ್ಳಲು ಪಕ್ಷ ತೀರ್ಮಾನಿಸಿದೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ ಸಂಕಲ್ಪನೂ ಈಡೇರುತ್ತೆ, ಡಿಕೆಶಿ ಸಿಎಂ ಆಗುತ್ತಾರೆ: ಜನಾರ್ದನ ರೆಡ್ಡಿ

ಇದಕ್ಕೆಲ್ಲ ಖರ್ಗೆ, ರಾಹುಲ್ ಗಾಂಧಿ ಪರಿಹಾರ ಹುಡುಕುತ್ತಾರೆ: ಕೆ ಹರಿಪ್ರಸಾದ್

ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು: ಜಗದೀಶ್ ಶೆಟ್ಟರೆ ಆಗ್ರಹ

BB Season 12, ಧ್ರುವಂತ್ ಮಾತಿಂದ್ದ ರೊಚ್ಚಿಗೆದ್ದ ಸೂರಜ್, ಧನುಷ್, ಸ್ಪಂದನಾ

ಸಿದ್ದರಾಮಯ್ಯ ಕಾಂಗ್ರೆಸ್ಸಿಗನೂ ಅಲ್ಲ, ಜೆಡಿಎಸ್ ಅಲ್ಲ, ಅಹಿಂದ ನಾಯಕನೂ ಅಲ್ಲ: ಎಚ್ ವಿಶ್ವನಾಥ್

ಮುಂದಿನ ಸುದ್ದಿ
Show comments