Select Your Language

Notifications

webdunia
webdunia
webdunia
webdunia

ವಿಶೇಷವಾದವರ ಜೊತೆ ರಮ್ಯಾ ಹುಟ್ಟುಹಬ್ಬ ಆಚರಣೆ

ವಿಶೇಷವಾದವರ ಜೊತೆ ರಮ್ಯಾ ಹುಟ್ಟುಹಬ್ಬ ಆಚರಣೆ
ಬೆಂಗಳೂರು , ಬುಧವಾರ, 29 ನವೆಂಬರ್ 2023 (17:33 IST)
ಬೆಂಗಳೂರು: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಇಂದು 41 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ದಿನವನ್ನು ಅವರು ವಿಶೇಷವಾದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ರಮ್ಯಾ ಹುಟ್ಟುಹಬ್ಬದ ಅಂಗವಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಸಾಕಷ್ಟು ಸಂದೇಶಗಳ ಮೂಲಕ ಶುಭಾಶಯ ಕೋರಿದ್ದರು. ಇವರಿಗೆಲ್ಲಾ ರಮ್ಯಾ ವಿಶೇಷವಾಗಿ ಧನ್ಯವಾದ ತಿಳಿಸಿದ್ದಾರೆ.

ರಮ್ಯಾಗೆ ನಾಯಿಗಳೆಂದರೆ ಎಲ್ಲಿಲ್ಲದ ಪ್ರೀತಿ ಎಂದು ಎಲ್ಲರಿಗೂ ಗೊತ್ತು. ಈ ಹುಟ್ಟುಹಬ್ಬವನ್ನು ಅವರು ತಮ್ಮ ಪ್ರೀತಿ ಪಾತ್ರ ನಾಯಿ ಮರಿಗಳೊಂದಿಗೆ ಕಾಲ ಕಳೆದಿದ್ದಾರೆ. ಪುಟಾಣಿ ನಾಯಿ ಮರಿಗಳೊಂದಿಗೆ ಆಟವಾಡುವ ವಿಡಿಯೋ ಹಂಚಿಕೊಂಡಿದ್ದಾರೆ.

ಜೊತೆಗೆ ‘ನಿಮ್ಮ ಹುಟ್ಟುಹಬ್ಬದ ಶುಭಾಶಯಗಳು ನನ್ನ ಹೃದಯ ಬೆಚ್ಚಗಾಗಿಸಿದೆ. ಅದೇ ರೀತಿ ಈ ವಿಡಿಯೋ ಕೂಡಾ ನಿಮ್ಮ ಹೃದಯ ಬೆಚ್ಚಗಾಗಿಸಬಹುದು’ ಎಂದು ಅಭಿಮಾನಿಗಳಿಗೆ ಸಂದೇಶವನ್ನೂ ಬರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಸೆಮಣೆ ಏರಲಿದ್ದಾರೆ ನಟಿ ಪೂಜಾ ಗಾಂಧಿ