Publish Date: Mon, 02 Dec 2019 (20:22 IST)
Updated Date: Mon, 02 Dec 2019 (20:25 IST)
ಅನರ್ಹ ಶಾಸಕರ ಪರವಾಗಿ ತುಪ್ಪದ ಬೆಡಗಿ ಹಾಗೂ ಕಿರುತೆರೆಯ ಪಾರು ಭರ್ಜರಿ ಪ್ರಚಾರ ನಡೆಸಿದ್ದಾರೆ.
ಕನ್ನಡ ಚಲನಚಿತ್ರ ರಂಗದ ನಟಿ ರಾಗಿಣಿ ದ್ವಿವೇದಿ ನಾಯಕ ನಟ ಅಭಿಷೇಕ್, ಪಾರು ಧಾರವಾಹಿ ಖ್ಯಾತಿಯ ಪಾರ್ವತಿ ಅವರು ಮಂಡ್ಯದ ಸಂತೇಬಾಚಹಳ್ಳಿಯಲ್ಲಿ ಬಿರುಸಿನ ಮತಪ್ರಚಾರ ನಡೆಸಿದ್ರು.
ಸತತವಾಗಿ ಎರಡು ಬಾರಿ ತಾಲ್ಲೂಕಿನ ಶಾಸಕರಾಗಿ ಜನರ ಸೇವೆ ಮಾಡಿರುವ ನಾರಾಯಣಗೌಡರು ತಾಲ್ಲೂಕಿನ ಅಭಿವೃದ್ಧಿಗೆ ಹಾಗೂ ತಾಲ್ಲೂಕಿನ ಸುಪುತ್ರ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಲು ಶಾಸಕ ಸ್ಥಾನವನ್ನು ತ್ಯಾಗಮಾಡಿ ಮತದಾರ ಪ್ರಭುಗಳಾದ ನಿಮ್ಮ ಮುಂದೆ ಬಂದಿದ್ದಾರೆ.
ನಾರಾಯಣಗೌಡರ ಕೈಹಿಡಿದು ಆಶೀರ್ವದಿಸಿ ಎಂದ ಜನರಲ್ಲಿ ಕೋರಿದ್ರು. ನಟಿಯರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬಿದ್ದರು.