Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಯನ್ನು ಹಿಮಾಲಯಕ್ಕೆ ಕಳುಹಿಸಿ ಎಂದ ನಟಿ ಗಾಯತ್ರಿ ರಘುರಾಮ್​

gayatri

sampriya

ಚೆನ್ನೈ , ಬುಧವಾರ, 22 ಮೇ 2024 (17:30 IST)
Photo By X
ಚೆನ್ನೈ: ತಮಿಳುನಾಡು ಬಿಜೆಪಿಗೆ ಗುಡ್‌ಬೈ ಹೇಳಿ ಐಐಎಡಿಎಂಕೆ ಪಕ್ಷ ಸೇರ್ಪಡೆಗೊಂಡಿರುವ ಮನಸೆಲ್ಲಾ ನೀನೇ ಚಿತ್ರದ ನಟಿ ಗಾಯತ್ರಿ ರಘುರಾಮ್  ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಒಡಿಶಾದಲ್ಲಿ ಚುನಾವಣಾ ಪ್ರಚಾರದ ವೇಳೆ ಖಾಸಗಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದ ಪ್ರಧಾನಿ ಮೋದಿ, ನಾನು ಜೈವಿಕವಾಗಿ ಅಥವಾ ಮನುಷ್ಯನಾಗಿ ಹುಟ್ಟಿರುವ ಸಾಧ್ಯತೆಯಿಲ್ಲ, ಆ ದೇವರೇ ನನ್ನನ್ನು ಭೂಮಿಗೆ ಕಳುಹಿಸಿದ್ದಾನೆ ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದರು. ಇದಕ್ಕೆ ಗಾಯತ್ರಿ ಕೌಂಟನ್‌ ನೀಡಿದ್ದಾರೆ.

ಪ್ರಸ್ತುತ ಎಐಎಡಿಎಂಕೆಯ ರಾಜ್ಯ ಮಹಿಳಾ ತಂಡದ ಉಪ ಕಾರ್ಯದರ್ಶಿಯಾಗಿರುವ ಗಾಯತ್ರಿ ರಘುರಾಮ್, ಪ್ರಧಾನಿ ಮೋದಿ ಮಾತನಾಡಿರುವ ವಿಡಿಯೋ ತುಣುಕನ್ನು ಶೇರ್​ ಮಾಡಿಕೊಂಡು ತೀವ್ರವಾಗಿ ಟೀಕಿಸಿದ್ದಾರೆ.

ನಾನು ಜೈವಿಕವಾಗಿ ಹುಟ್ಟಿಲ್ಲ, ದೇವರಿಂದ ಕಳುಹಿಸಲ್ಪಟ್ಟಿದ್ದೇನೆ ಮತ್ತು ತನ್ನನ್ನು ತಾನು ದೇವರ ಅವತಾರ ಎಂದು ಪ್ರಧಾನಿ ಮೋದಿ ಕರೆದುಕೊಳ್ಳುತ್ತಾರೆ. ಈ ಮೂಲಕ ತಮ್ಮ ತಾಯಿಯನ್ನು 30 ಸೆಕೆಂಡುಗಳ ವಿಡಿಯೋದಲ್ಲಿ ಅವಮಾನಿಸಿದ್ದಾರೆ. ಇದೆಲ್ಲವೂ ಅಧಿಕಾರಕ್ಕಾಗಿ ಎಂದು ಗಾಯತ್ರಿ ಟೀಕಿಸಿದ್ದಾರೆ.

ಪ್ರಧಾನಿ ಮೋದಿ ಅವರು ತಾನು ಕಾಶಿ ವಿಶ್ವನಾಥನಿಗಿಂತ ದೊಡ್ಡವರು ಎಂದು ಭಾವಿಸುತ್ತಾರೆ. ಇಂತಹ ಮನೋಭಾವದಿಂದ ವಾರಣಾಸಿಯಲ್ಲಿ ಗೆಲ್ಲಬಾರದು. ಬದಲಾಗಿ ಹಿಮಾಲಯದಲ್ಲಿ ಕುಳಿತು ತನ್ನನ್ನು ತಾನು ದೇವರಂತೆ ಬಿಂಬಿಸಿ ಧ್ಯಾನ ಮಾಡುವಂತೆ ಮಾಡಬೇಕು ಎಂದು ಗಾಯತ್ರಿ ಹೇಳಿದ್ದಾರೆ.

ಇದೀಗ ಗಾಯತ್ರಿ ಹೇಳಿಕೆಗೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ.
ನಾಲ್ಕನೇ ಬಾರಿ ಕೋಲ್ಕತ್ತ ನೈಟ್‌ ರೈಡರ್ಸ್‌ ಫೈನಲ್‌ಗೆ: ತಂಡದ ಯಶಸ್ಸಿನ ಹಿಂದಿದ್ದಾರೆ ಗೌತಿ

ಕೋಲ್ಕತ್ತ: ಕೋಲ್ಕತ್ತ ನೈಟ್​ರೈಡರ್ಸ್ ತಂಡವು ಐಪಿಎಲ್‌ನ ಮೊದಲ ಕ್ವಾಲಿಫೈಯರ್‌ನಲ್ಲಿ​ ಗೆದ್ದು ನಾಲ್ಕನೇ ಬಾರಿ  ಫೈನಲ್​ ಪ್ರವೇಶಿಸಿದೆ. ಇತ್ತ ಕೋಲ್ಕತ ಫೈನಲ್​ ಪ್ರವೇಶಿಸುತ್ತಿದ್ದಂತೆ ಮೆಂಟರ್​ ಗೌತಮ್​ ಗಂಭೀರ್ ಮತ್ತು ನಾಯಕ ಶ್ರೇಯಸ್​ ಅಯ್ಯರ್​  ಅವರಿಗೆ ತಂಡದ ಅಭಿಮಾನಿಗಳಿಂದ ಪ್ರಶಂಸೆಯ ಸುರಿಮಳೆಯಾಗುತ್ತಿದೆ.

ಭಾರತ ತಂಡದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೋಲ್ಕತ್ತ ತಂಡದ ನಾಯಕರಾಗಿ ಎರಡು ಬಾರಿ ಟ್ರೋಫಿ ತಂದುಕೊಂಡಿದ್ದಾರೆ. ಪ್ರಸ್ತುತ ಅವರು ತಂಡದ ಮೆಂಟರ್‌ ಆಗಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.

ಗೌತಿ ಕಳೆದ ವರ್ಷದವರೆಗೆ ಲಖನೌ ಸೂಪರ್‌ಜೈಂಟ್ಸ್‌ (ಎಲ್​ಎಸ್​ಜಿ) ತಂಡದ ಮೆಂಟರ್​ ಆಗಿದ್ದರು. ಈ ಬಾರಿ ಅವರು ಕೋಲ್ಕತ್ತ ನೈಟ್ ರೈಡರ್ಸ್‌ (ಕೆಕೆಆರ್​) ತಂಡಕ್ಕೆ ಶಿಫ್ಟ್ ಆಗಿದ್ದಾರೆ. ಕೆಕೆಆರ್​ನ ಹೊಸ ಮೆಂಟರ್ ಆಗಿ ಬಂದ ಬಳಿಕ ತಂಡದ ಸಂಯೋಜನೆಯನ್ನೇ ಗೌತಿ ಬದಲಾಯಿಸಿದರು. ಸುನಿಲ್ ನಾರಾಯಣ್ ಅವರನ್ನು ಆರಂಭಿಕರಾಗಿ ಕಳುಹಿಸ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಕಾರ್ಯಕರ್ತರ ಮೇಲಿನ ಮೇಲಿನ ದಬ್ಬಾಳಿಕೆ ಸಹಿಸಲಾರೆವು: ವಿಜಯೇಂದ್ರ ಎಚ್ಚರಿಕೆ