Select Your Language

Notifications

webdunia
webdunia
webdunia
webdunia

ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ: ಐದನೇ ಆರೋಪಿ ಅರೆಸ್ಟ್‌

Salman Khan Firing Case

Sampriya

ಮುಂಬೈ , ಮಂಗಳವಾರ, 7 ಮೇ 2024 (19:56 IST)
ಮುಂಬೈ:  ನಟ ಸಲ್ಮಾನ್ ಖಾನ್ ಅವರ ಮನೆ ಹೊರಗಡೆ ನಡೆಸಿದ ಗುಂಡಿನ ದಾಳಿ ಸಂಬಂದ ಇಂದು ಐದನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೊಹಮ್ಮದ್ ಚೌಧರಿ ಎಂದು ಗುರುತಿಸಲಾಗಿದ್ದು, ರಾಜಸ್ಥಾನದಲ್ಲಿ ಬಂಧಿಸಲಾಗಿದೆ.

ಚೌಧರಿ ಅವರನ್ನು ಇಂದು ಮುಂಬೈಗೆ ಕರೆತರಲಾಗುತ್ತಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಮತ್ತು ಕಸ್ಟಡಿಗೆ ಒತ್ತಾಯಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಪಾದಿತ ಶೂಟರ್‌ಗಳಾದ ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾ ಅವರಿಗೆ ಚೌಧರಿ ಹಣಕಾಸಿನ ನೆರವು ನೀಡಿದ್ದಾರೆ ಎಂದು ಮುಂಬೈ ಅಪರಾಧ ವಿಭಾಗದ ಅಧಿಕಾರಿಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ.

ಏಪ್ರಿಲ್ 14 ರಂದು ಸಲ್ಮಾನ್ ಖಾನ್ ಅವರ ಬಾಂದ್ರಾದಲ್ಲಿರುವ ನಿವಾಸವಾದ ದಿ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಇಬ್ಬರು ಮೋಟಾರ್‌ಬೈಕ್‌ನಲ್ಲಿ ಬಂದು ಗುಂಡಿನ ದಾಳಿ ನಡೆಸಿದರು.

ಘಟನೆಯ ನಂತರ, ನಾಲ್ವರನ್ನು ಬಂಧಿಸಿದ್ದು, ಅನುಜ್ ಥಾಪನ್, ಸೋನು ಬಿಷ್ಣೋಯ್, ಆಪಾದಿತ ಶೂಟರ್‌ಗಳಾದ ಸಾಗರ್ ಪಾಲ್ ಮತ್ತು ವಿಕ್ಕಿ ಗುಪ್ತಾ - ಬಂಧಿತ ಆರೋಪಿಗಳು.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಸಂಜೆ 5.30ರ ವರೆಗೆ 66.05ರಷ್ಟು ಮತದಾನ: ಜಿಲ್ಲಾವಾರು ಮತದಾನ ಪಟ್ಟಿ ಇಲ್ಲಿದೆ