ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರೆದಿದ್ದು, ನಟ ದರ್ಶನ್ ಅವರಿಗೂ ಒತ್ತುವರಿ ಕಾರ್ಯಾಚರಣೆ ಬಿಸಿ ತಟ್ಟುವ ಸಾಧ್ಯತೆ ಇದೆ.
ಬೆಂಗಳೂರಿನ ರಾಜರಾಜೇಶ್ವರಿನಗರ ಬಳಿ ರಂಗೋಲಿಹಳ್ಳ ಒತ್ತುವರಿಯಾಗಿದ್ದು, ಈ ಹಳ್ಳದ ವ್ಯಾಪ್ತಿಯ ಹಲಗವಡೇರಹಳ್ಳಿಯ ಸರ್ವೆ ನಂಬರ್ 55 ರಲ್ಲಿ ನಟ ದರ್ಶನ್ ಮನೆ ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸುಮಾರು 199 ಅಡಿ ಒತ್ತುವರಿಯಾದ ಹಳ್ಳದಲ್ಲಿ ನಟ ದರ್ಶನ್ ಮನೆ ನಿರ್ಮಿಸಿದ್ದಾರೆ ಎಂದು ಕಂದಾಯ ಇಲಾಖೆಯ ಸೂಪರ್ ಇಂಪೋಸ್ ಮ್ಯಾಪ್‌ನಲ್ಲಿ ದಾಖಲಾಗಿದೆ.
ಈ ಲೇಔಟ್‌ನಲ್ಲಿ ನಟ ದರ್ಶನ್ ನಿವೇಶನ ಖರೀದಿಸಿ ಮನೆ ನಿರ್ಮಿಸಿದ್ದಾರೆ. ಹೀಗಾಗಿ ಅವರಿಗೂ ರಾಜಕಾಲುವೆ ಒತ್ತುವರಿ ಬಿಸಿ ತಟ್ಟುವ ಸಾಧ್ಯತೆ ಇದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.