Daily Horoscope

Select Your Language

Notifications

webdunia
webdunia
webdunia
webdunia

ಅಡ್ಡಮತದಾನ ಮಾಡಿದವರ ವಿರುದ್ಧ ಕ್ರಮ ಖಂಡಿತಾ: ಆರ್‌ ಅಶೋಕ್

BJP Leader R Ashok
ಬೆಂಗಳೂರು: ಬಿಜೆಪಿಯ ಮೂವರು ಶಾಸಕರಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಆಗಿದೆ. ಅವರ ವಿರುದ್ಧ ಶಿಸ್ತುಕ್ರಮ ಕಂಡಿತಾ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ಮೇಲ್ಮನೆ ಚುನಾವಚಣೆ ಫಲಿತಾಂಶ ಪ್ರಕಟವಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಲಿಂಗರಾಜು ಪಾಟೀಲ್, ರಘು ಕೌಟಿಲ್ಯ ಗೆದ್ದಿದ್ದಾರೆ. ನಮ್ಮ ಕಡೆಯಿಂದ ಮೂರು ಮತ ಕ್ರಾಸ್ ಆಗಿದೆ ಎಂಬ ಮಾಹಿತಿ ಬಂದಿದೆ. ಇನ್ನೂ ಯಾರು ಇದನ್ನು ಮಾಡಿದ್ದಾರೆ ಎಂದು ಗೊತ್ತಾಗುತ್ತೆ. ಅವರ ವಿರುದ್ಧ ಪಕ್ಷದಿಂದ ಶಿಸ್ತು ಕ್ರಮ ನಿಶ್ಚಿತ. ನಮ್ಮ ಒಂದು ಮತ ಅಸಿಂಧು ಆಗಿದೆ. ನಾಲ್ಕು ವೋಟು ಜೆಡಿಎಸ್‌ಗೆ ಕೊಟ್ಟಿದ್ದೀವಿ ಎಂದು ಹೇಳಿದರು.

ಇನ್ನೂ ನಮ್ಮ 3 ಮತ ಕ್ರಾಸ್ ಆಗಿರೋದು ನಮಗೆ ಖಚಿತ ಆಗಿದೆ. ಅವರ ವಿರುದ್ಧ ಶಿಸ್ತು ಕ್ರಮ ಆಗುತ್ತೆ. ಯಾರು ಕ್ರಾಸ್ ವೋಟು ಹಾಕಿದ್ದಾರೆ ಅಂತ ಚರ್ಚೆ ಮಾಡ್ತೇವೆ. ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೇವೆ. ಆಗ ಯಾರು ಅಡ್ಡಮತದಾನ ಮಾಡಿದ್ದಾರೆ ಅಂತ ಗೊತ್ತಾಗುತ್ತದೆ. ಈ ಫಲಿತಾಂಶಕ್ಕೂ ನಮ್ಮಲ್ಲಿ ಸ್ಥಾನಗಳ ಬದಲಾವಣೆ ಆಗುವುದಕ್ಕೂ ಸಂಬಂಧ ಇಲ್ಲ. ಜೆಡಿಎಸ್‌ಗೆ ನಾಲ್ಕು ವೋಟ್ ಹಾಕಲು ನಾವು ಹೇಳಿದ್ವಿ. ಅವರಿಗೆ ಹಾಕಿದ್ದಾರೆ ಅಂತಾ ಅಂದುಕೊಂಡಿದ್ದೀವಿ ಎಂದು ಹೇಳಿದರು. 

ಬಿ.ವೈ.ವಿಜಯೇಂದ್ರ ಮಾತನಾಡಿ, ಚುನಾವಣೆಯಲ್ಲಿ ಗೆದ್ದ ಲಿಂಗರಾಜು ಪಾಟೀಲ್, ರಘು ಕೌಟಿಲ್ಯ ಅವರಿಗೆ ಅಭಿನಂದನೆಗಳು. 

Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಕೆಲಸದಾಕೆಯನ್ನು ಬ್ಯಾಟ್‌ನಿಂದ ಕೊಚ್ಚಿ ಕೊಂದ ದೆಹಲಿ ಚರ್ಮರೋಗ ತಜ್ಞ