Webdunia - Bharat's app for daily news and videos

Install App

ಮಾದಕ ವಸ್ತು ಸಾಗಾಣಿಕೆ ಆರೋಪ : ಮಾಜಿ ಮಿಸ್ ಕರ್ನಾಟಕ ಬಂಧನ

Webdunia
ಗುರುವಾರ, 23 ಜೂನ್ 2016 (09:36 IST)
ಕೇಂದ್ರ ಮಾದಕ ವಸ್ತು ಕಳ್ಳಸಾಗಣೆ ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ಮಾದಕ ವಸ್ತು ಸಾಗಾಣಿಕೆ ಆರೋಪದ ಮೇಲೆ ಆರ್.ಟಿ ನಗರದಲ್ಲಿ ಮಂಗಳವಾರ ಚಿಕ್ಕಮಗಳೂರು ಮೂಲದ 26 ವರ್ಷದ ಮಾಜಿ ಮಿಸ್ ಕರ್ನಾಟಕ ದರ್ಶಿತ್ಮಿತಾ ಗೌಡಾರನ್ನು ಬಂಧಿಸಿದ್ದಾರೆ. 

ನಗರದಲ್ಲಿ ಮಾಡೆಲಿಂಗ್ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಈಕೆಯ ಮೇಲೆ ಸ್ನೇಹಿತರ ಜತೆ ಸೇರಿ ಮಾದಕ ವಸ್ತು ಸಾಗಾಣಿಕೆ ಮಾಡಿದ ಆರೋಪವಿದೆ. 
 
2015ರಲ್ಲಿ ರೂಪದರ್ಶಿ ದರ್ಶಿತ್ಮಿತಾ ಸ್ನೇಹಿತ ಅಬ್ದುಲ್ ಖಾದರ್ ಎಂಬಾತನನ್ನು ಬಂಧಿಸಲಾಗಿತ್ತು. ಈತನು ನೀಡಿದ ಮಾಹಿತಿ ಮೇರೆಗೆ ರೂಪದರ್ಶಿ ಮತ್ತು ಆಕೆಯ ಮೂವರು ಸ್ನೇಹಿತರನ್ನು ಬಂಧಿಸಲಾಗಿದೆ. ಅವರಲ್ಲಿ ಇಬ್ಬರು ಮಂಗಳೂರು ಮೂಲದವರಾಗಿದ್ದು ಮತ್ತೊಬ್ಬರು ಬೆಂಗಳೂರಿನವರಾಗಿದ್ದಾರೆ. ಬಾಲ್ಯ ಸ್ನೇಹಿತರಾಗಿರುವ ಖಾದರ್ ಮತ್ತು ರೂಪದರ್ಶಿ ಗೋವಾ ಹಾಗೂ ವಿದೇಶದಿಂದ ಮಾದಕ ವಸ್ತುಗಳನ್ನು ತಂದು, ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. 
 
ರೂಪದರ್ಶಿಯನ್ನು ಮಂಗಳವಾರವೇ ಬಂಧಿಸಲಾಗಿದ್ದು ತೀವ್ರ ವಿಚಾರಣೆಗೊಳಸಪಡಿಸಲಾಗಿದೆ. ಬುಧವಾರ ಆಕೆಯನ್ನು ನ್ಯಾಯಾಧೀಶರ ಮುಂದೆ ಸಹ ಹಾಜರು ಪಡಿಸಲಾಗಿತ್ತು. 
 
ಆದರೆ ಖಾದರ್‌ನ ಅವ್ಯವಹಾರಗಳಲ್ಲಿ ತನ್ನ ಪಾತ್ರವನ್ನು ರೂಪದರ್ಶಿ ತಳ್ಳಿ ಹಾಕಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಪ್ರಾಪ್ತ ಮಗಳ ಮೇಲೆ ಮೂರು ವರ್ಷ ಲೈಂಗಿಕ ದೌರ್ಜನ್ಯ: ಪಾಪಿ ಅಪ್ಪನಿಗೆ ಜೀವಾವಧಿ ಶಿಕ್ಷೆ

ಯೋಗಿ ಸಿಎಂ ಆದ್ಮೇಲೆ ಯುಪಿಯಲ್ಲಿ 15 ಸಾವಿರ ಎನ್‌ಕೌಂಟರ್‌, 30 ಸಾವಿರ ಕ್ರಿಮಿನಲ್‌ಗಳ ಅರೆಸ್ಟ್‌

ಜಮೀನು ಒತ್ತುವರಿ ಪ್ರಕರಣ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕುಮಾರಸ್ವಾಮಿಗೆ ಬಿಗ್ ರಿಲೀಫ್‌

ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ಡಿಎನ್‌ಎ ಟೆಸ್ಟ್‌ಗೆ ಮುಂದಾದ ಪಂಜಾಬ್ ಸರ್ಕಾರ

ಶುಭಾಂಶು ಶುಕ್ಲಾ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಇಸ್ರೋ

ಮುಂದಿನ ಸುದ್ದಿ