Daily Horoscope
✕

ಅಪಘಾತ: 25 ಲಕ್ಷ ರೂ ಪರಿಹಾರ ಘೋಷಣೆ

Webdunia
ಮಂಗಳವಾರ, 29 ನವೆಂಬರ್ 2022 (17:31 IST)
ಬೈಕ್​ಗೆ BBMP ಕಸದ ಲಾರಿ ಡಿಕ್ಕಿ ಹೊಡೆದು ನೆಲಮಂಗಲ ಮೂಲದ ಮಹೇಶ್, ಮಾರುತಿ ಎಂಬ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾ. ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದ ಬಳಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹೇಶ್ ಮತ್ತು ಮಾರುತಿ ಕುಟುಂಬಗಳಿಗೆ BBMP ತಲಾ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಘಟನೆ ಖಂಡಿಸಿ ಹುಲಿಕುಂಟೆ ಗ್ರಾಮಸ್ಥರು ರಸ್ತೆ ತಡೆದು ಧರಣಿ ನಡೆಸಿದ್ದರು. ಮೃತದೇಹಗಳನ್ನ‌ ಅಪಘಾತ ಸ್ಥಳದಿಂದ ತೆರವು ಮಾಡಲು ಬಿಡದೆ ಧರಣಿ ನಡೆಸಲಾಗಿತ್ತು. ಹೀಗಾಗಿ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಆಗಮಿಸಿ ಎರಡೂ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತಪಟ್ಟ ಇಬ್ಬರಿಗೂ ತಲಾ 25 ಲಕ್ಷ ಪರಿಹಾರ ಘೋಷಣೆ ಮಾಡಿ ಧರಣಿ ನಿರತರ ಮನವೊಲಿಸಿ ಧರಣಿ ಅಂತ್ಯ ಮಾಡಿಸಿದ್ದಾರೆ. ಬಳಿಕ ಮೃತ ದೇಹಗಳು ದೊಡ್ಡಬಳ್ಳಾಪುರ ಶವಾಗಾರಕ್ಕೆ‌ ರವಾನಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾಸ್ ಪೋರ್ಟ್ ನವೀಕರಣಕ್ಕೆ ಬಂದ ವ್ಯಕ್ತಿಯ ಪುಸ್ತಕ ನೋಡಿ ಅಧಿಕಾರಿಗಳೇ ಶಾಕ್: ಅಂತಹದ್ದೇನಿತ್ತು ನೀವೇ ನೋಡಿ Video

ಹಾಲಿನ ದರ ಆಯ್ತು, ಇನ್ನೀಗ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬರೆ: ನಾಳೆಯೇ ಘೋಷಣೆ

ಗೃಹಜ್ಯೋತಿ ಯೋಜನೆ ಗೆ ಕತ್ತರಿ: 1.41 ಲಕ್ಷ ಜನರಿಗೆ ಫ್ರೀ ಕರೆಂಟ್ ಗೋತಾ

ಎಣ್ಣೆ ಹೊಡೆದು ಹಾಳಾಗ್ತಿದ್ದಾರೆ ಪತಿ ಮಹಾಶಯರು.. ರೊಚ್ಚಿಗೆದ್ದ ಮಹಿಳೆಯರು ಮಾಡಿದ ಕೆಲಸಕ್ಕೆ ನೆಟ್ಟಿಗರ ಶಹಬ್ಬಾಶ್ Video

ಜನಾಗ್ರಹಕ್ಕೆ ಮಣಿದ ಸರ್ಕಾರ: ನಂದಿನಿ ಮೊಸರಿನ ದರ ಇಳಿಕೆಗೆ ಡಿ.ಕೆ. ಶಿವಕುಮಾರ್ ಸೂಚನೆ

ಮುಂದಿನ ಸುದ್ದಿ
Show comments