Webdunia - Bharat's app for daily news and videos

Install App

ಬೆಂಗಳೂರಿನಲ್ಲಿ BDA ಮೇಲೆ ಎಸಿಬಿ ದಾಳಿ

Webdunia
ಸೋಮವಾರ, 22 ನವೆಂಬರ್ 2021 (20:46 IST)
ಬೆಂಗಳೂರು:  ಬೆಂಗಳೂರಿನಲ್ಲಿ BDA ಮೇಲೆ ಎಸಿಬಿ ದಾಳಿ ನಡೆಸಿದ ಬಳಿಕ ಬಿಡಿಎ ವಿರುದ್ದ ಸಾಲು ಸಾಲು ದೂರುಗಳು ಕೇಳಿ ಬರುತ್ತಿದ್ದು,  ಬಿಡಿಎನಿಂದ ವಂಚಿತರಾಗಿರುವ  ಉದ್ಯಮಿಗಳು, ಸಾರ್ವಜನಿಕರು ದಾಖಲೆಗಳ ಸಹಿತ ದೂರು ನೀಡುತ್ತಿದ್ದಾರೆ.
ಇದುವರೆಗೆ ಎಸಿಬಿಗೆ ಹೊಸದಾಗಿ ಮೂವತ್ತಕ್ಕೂ ಹೆಚ್ಚು ದೂರು ಬಂದಿದ್ದು,  ಪ್ರತಿಯೊಂದು ದೂರನ್ನು ಪರಿಶೀಲನೆ ನಡೆಸಲು ಎಸಿಬಿ ತೀರ್ಮಾನ ಮಾಡಿದೆ. ದೂರುಗಳನ್ನು  ಪರಿಶೀಲನೆ ನಡೆಸಿ ಸಾಕ್ಷಿ ಕಲೆ ಹಾಕಿ ಕೇಸ್ ದಾಖಲು ಮಾಡಲು ಎಸಿಬಿ ನಿರ್ಧರಿಸಿದೆ. ಎಸಿಬಿ ಬಳಿಯೇ ಬಿಡಿಎ DS ಗಳ ಕಚೇರಿಯ ಬೀಗದ ಕೀಗಳಿದ್ದು, ನವೆಂಬರ್ 25 ರ ವರೆಗೆ ಎಸಿಬಿ ಸರ್ಚ್ ವಾರೆಂಟ್ ಹೊಂದಿದೆ.  ನಾಳೆ ಬೆಳಗ್ಗೆಯಿಂದ ಮತ್ತೆ ಎಸಿಬಿ ದಾಳಿ ಮುಂದುವರೆಯಲಿದೆ. ಎಸಿಬಿ ತನಿಖೆ ವೇಳೆ ಬ್ರೋಕರ್ ಗಳ ಮೂಲಕ ಹಣ ಪಡೆದು ವಂಚನೆ ಮಾಡಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ಹಿಂದೆ 2000ನೇ ಇಸವಿ ಹಾಗೂ ಅದಕ್ಕಿಂತ ಹಿಂದೆ ಮಾರಿದ್ದ ಸೈಟ್ ಗಳನ್ನೆ ಮತ್ತೆ ಮತ್ತೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments