Webdunia - Bharat's app for daily news and videos

Install App

ಅಬ್ಬಬ್ಬಾ ಲಾಟರಿ..ರಾತ್ರಿ ಬೆಳಗಾಗುವುದರೊಳಗೆ ಕೋಟ್ಯಧಿಪತಿಯಾದ ಬೈಕ್ ಮೆಕಾನಿಕ್

Sampriya
ಗುರುವಾರ, 10 ಅಕ್ಟೋಬರ್ 2024 (16:24 IST)
Photo Courtesy X
ಮಂಡ್ಯ: ಇಲ್ಲಿನ ಬೈಕ್ ಮೆಕ್ಯಾನಿಕ್ ಒಬ್ಬರು ರಾತ್ರೋರಾತ್ರಿ ಕೋಟ್ಯಧಿಪತಿ ಆಗಿದ್ದಾರೆ. ಮಂಡ್ಯದ ಅಲ್ತಾಫ್ ಪಾಷಾ ಎಂಬವರು ಕೇರಳಕ್ಕೆ ಹೋಗಿದ್ದ ವೇಳೆ ₹500ಲಾಟರಿ ಟಿಕೆಟ್‌ ಅನ್ನು 5 ತಿಂಗಳ ಹಿಂದೆ ಖರೀದಿಸಿದ್ದರು.

ಇದೀಗ ಆ ಟಿಕೆಟ್‌ ಬರೋಬ್ಬರಿ ‌ 25 ಕೋಟಿ ರೂ. ಬಹುಮಾನ ಗೆದ್ದುಕೊಟ್ಟಿದೆ. ರಾತ್ರಿ ಬೆಳಗಾಗುವುದರೊಳಗೆ ಕರ್ನಾಟಕದ ಸಾಮಾನ್ಯ ವ್ಯಕ್ತಿಯೊಬ್ಬ ಕೋಟ್ಯಾಧಿಪತಿಯಾಗಿದ್ದಾನೆ.

ಅಲ್ತಾಫ್‌ ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ನಿವಾಸಿ. ವೃತ್ತಿಯಲ್ಲಿ ಬೈಕ್ ಮೆಕಾನಿಕ್ ಆಗಿರುವ ಅಲ್ತಾಫ್, ವಯನಾಡಿನಲ್ಲಿರುವ  ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು.ಈ ವೇಳೆ ‌ಪರಿಚಯಸ್ಥರ ಮೂಲಕ ಕೇರಳದ ತಿರುವೋಣಂ ಲಾಟರಿ  ಟಿಕೆಟ್‌ ಖರೀದಿ ಮಾಡಿದ್ದರು. ಇದೀಗ ಅಲ್ತಾಫ್ ಪಾಷಾ ಅವರು 25 ಕೋಟಿ ರೂ. ‌ಗೆದ್ದಿದ್ದಾರೆ.

ಈ ಬಗ್ಗೆ ಮಾಧ್ಯಮದ ಬಳಿ ಮಾತನಾಡಿದ ಅಲ್ತಾಫ್ ಅವರು, ಇದರಿಂದ ತುಂಬಾನೆ ಖುಷಿಯಾಗಿದ್ದೇನೆ. ಬಂದ ಹಣದಲ್ಲಿ ಮನೆ ಕಟ್ಟಿಸಿ, ಮಗಳಿಗೆ ಮದುವೆ ಮಾಡಿಸುತ್ತೇನೆ. ನನ್ನ ಕೈಯಲ್ಲಿ ಆಗುವಷ್ಟು ಜನ ಸಾಮಾನ್ಯರಿಗೆ ಸಹಾಯ ಮಾಡುತ್ತೇನೆ ಎಂದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka: ಪೋಷಕರ ಸಂದರ್ಶನ ಮಾಡುವಂತಿಲ್ಲ, ಹೆಚ್ಚು ಫೀಸ್ ಕೇಳೋ ಹಾಗಿಲ್ಲ: ಖಾಸಗಿ ಶಾಲೆಗಳಿಗೆ ಹೊಸ ರೂಲ್ಸ್ ಇಲ್ಲಿದೆ

Shocking video: ನೆಗಡಿ ಎಂದು ಬಂದ ಪುಟ್ಟ ಮಗುವಿಗೆ ಸಿಗರೇಟು ಸೇದಲು ಹೇಳಿಕೊಟ್ಟ ವೈದ್ಯ

Video: ನಾವು ಹಿಂದೂಗಳಂತಲ್ಲ, ಕಾಶ್ಮೀರ ಯಾವತ್ತಿದ್ರೂ ನಮ್ಮದೇ, ಶತ್ರುಗಳು ಏನೂ ಮಾಡಕ್ಕಾಗಲ್ಲ: ಪಾಕ್ ಸೇನಾ ಮುಖ್ಯಸ್ಥ

West Bengal: ಪಶ್ಚಿಮ ಬಂಗಾಲದಲ್ಲಿ ವಕ್ಫ್ ಗಲಾಟೆಯಲ್ಲಿ ಸುಟ್ಟು ಕರಕಲಾದ ಸೀರೆಅಂಗಡಿ ವಿಡಿಯೋ ನೋಡಿದ್ರೆ ಕರುಳು ಚುರಕ್ ಅನ್ನುತ್ತೆ

Arecanut price today: ಅಡಿಕೆ ಬೆಳೆಗಾರರಿಗೆ ನೆಮ್ಮದಿ ಕೊಡುವ ಸುದ್ದಿ, ಇಂದಿನ ಬೆಲೆ ಎಷ್ಟಾಗಿದೆ ನೋಡಿ

ಮುಂದಿನ ಸುದ್ದಿ
Show comments